

ಮಂಗಳೂರು: ಸುಧೀರ್ ಶೆಟ್ಟಿ ಅವರು ಮೇಯರ್ ಆಗಿ ನಡೆಸುತ್ತಿರುವ ಕೊನೆಯ ಸಾಮಾನ್ಯ ಸಭೆ ಗದ್ದಲದಿಂದಲೇ ಆರಂಭಗೊಂಡಿತು.
ಕಳೆದ ಸಭೆಯ ಬಳಿಕ ಪಾಲಿಕೆ ಆಡಳಿತ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಅಧ್ಯಕ್ಷತೆ ವಹಿಸಿದ ಮೇಯರ್ ಸುಧೀರ್ ಶೆಟ್ಟಿ ಅವರು ಮಾಹಿತಿ ನೀಡುತ್ತಿರುವ ಸಂದರ್ಭ ಮಾತನಾಡಲು ಬಿಜೆಪಿ ಸದಸ್ಯೆ ಸಂಗೀತ ನಾಯಕ್ ಹಾಗೂ ಪ್ರತಿಪಕ್ಷ ನಾಯಕ್ ಪ್ರವೀಣ್ ಚಂದ್ರ ಆಳ್ವ ಎದ್ದು ನಿಂತರು.
ಮೇಯರ್ ಬಳಿಕ ಪ್ರತಿಪಕ್ಷ ನಾಯಕನಿಗೆ ಮಾತನಾಡಲು ಅವಕಾಶ ಒದಗಿಸಬೇಕು ಎಂದು ಕಾಂಗ್ರೆಸ್ ಮುಖಂಡರ ಒತ್ತಾಯಿಸಿದರು.
ಸಂಗೀತ ನಾಯಕ್ ಮೊದಲು ನಿಂತಿದ್ದಾರೆ. ಅವರು ಮೊದಲು ಮಾತನಾಡಲಿ ಎಂದು ಮೇಯರ್ ಸೂಚನೆ
ಒತ್ತಾಯ ಗದ್ದಲದ ಸ್ವರೂಪ ಪಡೆಯಿತು. ಮೇಯರ್ ಪೀಠದ ಎದುರು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಧರಣಿ ಕುಳಿತರು.
ಇತ್ತೀಚೆಗೆ ನಡೆದ ಪ್ರತಿಭಟನೆ ಸಂದರ್ಭ ಕಾಂಗ್ರೆಸ್ ಸದಸ್ಯರೋರ್ವರು ಬಸ್ಸಿಗೆ ಕಲ್ಲೆಸೆದ ಪ್ರಕರಣವನ್ನು ಸದಸ್ಯೆ ಸಂಗೀತ ನಾಯಕ್ ಪ್ರಸ್ತಾವಿಸಿದರು.
ಬಸ್ಸಿಗೆ ಕಲ್ಲೆಸೆದ ಕಾಂಗ್ರೆಸ್ ಸದಸ್ಯರ ದುರ್ವರ್ತನೆ ಸದನದಲ್ಲಿ ಮುಂದುವರಿದಿದೆ ಎಂದು ಹೇಳಿದ ಮೇಯರ್ ಮಾತು ಪ್ರತಿಪಕ್ಷ ಸದಸ್ಯರನ್ನು ಇನ್ನಷ್ಟು ಕೆರಳಿಸಿತು.
ಸಾರ್ವಜನಿಕ ಸೊತ್ತು ಹಾನಿಗೊಳಿಸಿದ ಮನಪಾ ಸದಸ್ಯರನ್ನು ಮಾರ್ಶಲ್ ಗಳ ಮೂಲಕ ಸದನದಿಂದ ಹೊರಹಾಕುವಂತೆ ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ ಆಗ್ರಹ.
ಸಭೆಯನ್ನು ಮೇಯರ್ ಮುಂದೂಡಿದರು.