

ಮಂಗಳೂರು: ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್‌ನಲ್ಲಿ ಗುರುವಾರ ವಿಟ್ಲ ಮೂಲದ ವಿದ್ಯಾರ್ಥಿನಿ ನಿಶಾ (15) ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ದಿಗಂತ್ (15), ದಿವ್ಯರಾಜ್ (15), ತೇಜಸ್ (14), ಕೀರ್ತನ್ (16), ಅಶ್ಮಿತಾ (15) ಹಾಗೂ ಮೃತ ನಿಶಾ ರಜೆಯ ಹಿನ್ನೆಲೆಯಲ್ಲಿ ಬೀಚ್‌ಗೆ ಬಂದಿದ್ದರು. ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ ರಭಸವಾಗಿ ಬಂದ ಅಲೆಗೆ ಸಿಲುಕಿ ಎಲ್ಲರೂ ಮುಳುಗಿದ್ದಾರೆ. ಅಲ್ಲಿದ್ದ ಮೀನುಗಾರರು ಮತ್ತು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ತೇಜಸ್ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದವರೆಲ್ಲರೂ ಆರೋಗ್ಯವಾಗಿದ್ದಾರೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.