

ಮಂಗಳೂರು: ಗ್ರಾಹಕರ ವಿಶ್ವಾಸಾರ್ಹತೆಯೊಂದಿಗೆ ಚಿಲಿಂಬಿಯಲ್ಲಿ ಮುನ್ನಡೆಯುತ್ತಿರುವ ಚಿನ್ನ, ಬೆಳ್ಳಿ, ವಜ್ರ ಹಾಗೂ ನವರತ್ನಗಳ ಮಾರಾಟ ಮಳಿಗೆ ‘ಸ್ವರ್ಣ’ ಪ್ರಸ್ತುತ 2,500 ಚದರ ಅಡಿ ವಿಸ್ತೀರ್ಣದಲ್ಲಿ ಆಧುನಿಕ ರೀತಿಯಲ್ಲಿ ನವ ವಾಸ್ತು ವಿನ್ಯಾಸದಲ್ಲಿ ಗ್ರಾಹಕ ಸ್ನೇಹಿಯಾಗಿ ರೂಪುಗೊಂಡಿದೆ.
ಗ್ರಾಹಕರು ಮಳಿಗೆಯೊಳಗೆ ಪ್ರವೇಶವಾಗುತ್ತಿದ್ದಂತೆ ವಿಶಾಲವಾದ ಜಾಗದಲ್ಲಿ ವಜ್ರಾಭರಣ, ಚಿನ್ನಾಭರಣ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಕೆಂಪು ಅಡ್ಡಿಗೆ, ಮಲ್ಲಿಗೆ ಮೊಗ್ಗು, ಜೋಮಾಲೆ, ಮೋಹನ ಮಾಲೆ, ಗಿಳಿ ಓಲೆ ಮುಂತಾದ ಸಾಂಪ್ರದಾಯಿಕ ಆಭರಣಗಳು ಹೆಚ್ಚು ಪ್ರಸಿದ್ಧ ಮತ್ತು ಅತೀ ಹೆಚ್ಚು ಮಾರಾಟವಾಗುತ್ತವೆ. ಇಲ್ಲಿ ಹೊಸ ಆಧುನಿಕ ಟೆಂಪಲ್ ಆ್ಯಂಟಿಕ್ ಆಭರಣಗಳು ಮತ್ತು ಎಂಬೋಸ್ ರೀತಿಯ ನಕ್ಷೆ ಆಭರಣಗಳು ಲಭ್ಯವಿವೆ.
ಸ್ವರ್ಣವು ತನ್ನ ಗ್ರಾಹಕರ ಆಭರಣ ಬೇಡಿಕೆಗಳನ್ನು ಪೂರೈಸಲು ಉಡುಪಿಯಲ್ಲಿ 200ಕ್ಕೂ ಅಧಿಕ ಪ್ರತಿಭಾನ್ವಿತ ನುರಿತ ಕುಶಲಕರ್ಮಿಗಳ ತಂಡವನ್ನು ಹೊಂದಿದೆ. ಈಗ 3ಡಿ ಪ್ರಿಂಟಿಂಗ್, ಲೇಸರ್ ಸೋಲ್ಡಿಂಗ್ ಸಿಎಡಿ/ಸಿಎಎಂ ಎಂಬ ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿದೆ. ಇದರಿಂದ ಎಲ್ಲ ವಿನ್ಯಾಸದ ಆಭರಣಗಳಿಗೆ ಹೆಚ್ಚು ನಾಜೂಕು ಮತ್ತು ದೀರ್ಘ ಬಾಳಿಕೆ ಸಿಗುತ್ತದೆ.
ವಧುವಿನ ಮೇಲೆ ಆಭರಣ ಪರಿಕಲ್ಪನೆ : ಸ್ವರ್ಣ ಜ್ಯುವೆಲ್ಲರ್ಸ್, ಚಿಲಿಂಬಿ ಈ ವಿಶೇಷ ಸಂದರ್ಭದಲ್ಲಿ ‘ವಧು’ವಿನ ಮೇಲೆ ಸ್ಪಾಟ್ ಲೈಟ್ ಹಾಕಿ ಮತ್ತು ಅವರ ಆಯ್ಕೆ ಆಭರಣಗಳನ್ನು ಧರಿಸಿ ನೋಡುವ ಅವಕಾಶವನ್ನು ಒದಗಿಸಿದ್ದಾರೆ. ವಧುವಿಗೆ ತನ್ನ ಆಭರಣಗಳನ್ನು ಆಯ್ಕೆ ಮಾಡಿ ಧರಿಸಿ ನೋಡಲು ಮತ್ತು ತಕ್ಷಣವೇ ತೀರ್ಮಾನಕ್ಕೆ ಬರಲು ಸೀರೆಗಳ ಆಯ್ಕೆಯನ್ನು ನೀಡಲಾಗುತ್ತದೆ. ಈ ಹೊಸ ಪರಿಕಲ್ಪನೆಯು ವಿಶಿಷ್ಟವಾಗಿದ್ದು, ಇದರಿಂದ ಪೋಷಕರು/ಸಂಬಂಧಿಗಳು ಮತ್ತು ವಧುವಿಗೆ ತಮ್ಮ ಆಯ್ಕೆಯನ್ನು ಸಮರ್ಥವಾಗಿ ಮಾಡಲು ಸಹಕಾರಿಯಾಗಿದೆ.
ಸಹಜ ಬೆಳಕಿಗೆ ಆದ್ಯತೆ: ಸಾಮಾನ್ಯವಾಗಿ ಜ್ಯುವೆಲರಿ ಮಳಿಗೆಗಳಲ್ಲಿ ಕಣ್ಣು ಕೋರೈಸುವ ಬೆಳಕು ಹಾಗೂ ಗಾಢ ವರ್ಣ ವಿನ್ಯಾಸ ಇರುವುದು ಖರೀದಿಸಲು ಬರುವವರಿಗೆ ಪೂರಕವಾಗಿರುವುದಿಲ್ಲ. ಹಾಗಾಗಿ ಮನಸ್ಸಿಗೆ ಒಪ್ಪುವ ಪೇಸ್ಟಲ್ ಕಲರ್ ವಿನ್ಯಾಸದೊಂದಿಗೆ ಸಹಜವಾದ ನ್ಯಾಚುರಲ್ ನ್ಯೂಟ್ರಲ್ ಲೈಟಿಂಗ್ ಅಳವಡಿಸಿದೆ.
ಪಾರದರ್ಶಕತೆಗೆ ಒತ್ತು: ಗ್ರಾಹಕರು ಹಳೇ ಚಿನ್ನವನ್ನು ಎಕ್ಸೇಂಜ್ ಮಾಡುವ ಸಂದರ್ಭದಲ್ಲಿ ಯಾವುದೇ ಅನುಮಾನ ವ್ಯಕ್ತವಾಗಬಾರದು ಎನ್ನುವ ಉದ್ದೇಶದಿಂದ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಹಕರು ನೀಡುವ ಹಳೇ ಚಿನ್ನವನ್ನು ಅವರ ಎದುರಲ್ಲೇ ಕರಗಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಹೊರಗಿನಿಂದ ಗಾಜು ಅಳವಡಿಸಿದ ಕೊಠಡಿಯಲ್ಲಿ ಸಿಬ್ಬಂದಿ ಕೆಲಸ ಮಾಡುವುದನ್ನು ಗ್ರಾಹಕರು ನೇರವಾಗಿ ವೀಕ್ಷಿಸಬಹುದು.
ಗ್ರಾಹಕರಿಗೆ ವಿಶೇಷ ಕೊಡುಗೆ
ಸ್ವರ್ಣ ಸಂಸ್ಥೆಯ 60ನೇ ವರ್ಷದ ಸಂಭ್ರಮಾಚರಣೆ ನೆನಪಿಗಾಗಿ ಮತ್ತು ಚಿಲಿಂಬಿಯ ಶೋರೂಂ ನವೀಕರಣಗೊಂಡ ಸಂದರ್ಭದಲ್ಲಿ ಸ್ವರ್ಣ ವಿಶೇಷ ಕೊಡುಗೆ ಘೋಷಿಸಿದೆ. ಜು.1 ರಿಂದ 14ರ ತನಕ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ. ವಜ್ರಾಭರಣ ಖರೀದಿಗೆ ಶೇ.100 ಮೇಕಿಂಗ್ ದರ ಕಡಿತ ಹಾಗೂ ಚಿನ್ನಾಭರಣ ಖರೀದಿಗೆ ಶೇ.15ರಷ್ಟು ಮೇಕಿಂಗ್ ದರ ಕಡಿತ ಕೊಡುಗೆ ಘೋಷಿಸಲಾಗಿದೆ. ಮಂಗಳೂರಿನ ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸ್ವರ್ಣ ಮಳಿಗೆಯ ನಿರ್ದೇಶಕ ಅಜಯ್ ನಾಯಕ್ ಗುಜ್ಜಾಡಿ ತಿಳಿಸಿದ್ದಾರೆ.
ನಮ್ಮ ನವೀಕೃತ ಮಂಗಳೂರು ಚಿಲಿಂಬಿಯ ಶೋರೂಂನಲ್ಲಿ ಪರಂಪರೆಯ ಹೆಮ್ಮೆಯೊಂದಿಗೆ ಹೊಸ ಆಧುನಿಕ ಆಭರಣಗಳ ಯುಗ ಆರಂಭವಾಗಿದೆ. 60ನೇ ವರ್ಷದ ಸಂಭ್ರಮಾಚರಣೆ ಸಂದರ್ಭ ನಮ್ಮ ವಿಶೇಷ ಕೊಡುಗೆಯ ಸದವಕಾಶವನ್ನು ಗ್ರಾಹಕರು ಪಡೆದುಕೊಳ್ಳಬೇಕು.
ಅಜಯ್ ನಾಯಕ್ ಗುಜ್ಜಾಡಿ
ಸ್ವರ್ಣ ಮಳಿಗೆ ನಿರ್ದೇಶಕ