ಚೇತನಾ ಬಾಲವಿಕಾಸ ಕೇಂದ್ರದಲ್ಲಿ ದೀಪಾವಳಿ ಆಚರಣೆ

mng--5 Nov Chethana school
Published on

ಮಂಗಳೂರು: ಸೇವಾ ಭಾರತಿ ಮಂಗಳೂರು ಇದರ ಅಂಗಸಂಸ್ಥೆಯಾದ ವಿ.ಟಿ. ರಸ್ತೆಯ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ಸೋಮವಾರ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಜಿ. ಎಸ್.ಬಿ ಮಹಿಳಾ ಸಂಘದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳು ಭಾಗವಹಿಸಿದರು. ಶಾಲಾ ಶಿಕ್ಷಕಿಯರು ರಂಗೋಲಿಯನ್ನು ಬಿಡಿಸಿ, ನಂತರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಲಕ್ಷ್ಮೀ ಪೂಜೆಯನ್ನು ನಡೆಸಿ ದೇವರ ಸ್ತುತಿಗೈಯಲಾಯಿತು. ಸಂಘದ ಪರವಾಗಿ ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಚೇತನಾ ಶಾಲೆಯ ಮುಖ್ಯ ಶಿಕ್ಷಕಿ ಸುಪ್ರೀತಾ, ಜಿ. ಎಸ್. ಬಿ ಸಂಘದ ಅಧ್ಯಕ್ಷೆ ಪೂರ್ಣಿಮಾ ಭಂಡಾರ್ಕರ್ ಇತರ ಪದಾಧಿಕಾರಿಗಳು, ಶಿಕ್ಷಕಿಯರು ಮತ್ತು ಶಿಕ್ಷಕೇತರರು, ಇತರ ಸಿಬ್ಬಂದಿ ವರ್ಗದವರು, ಸ್ವಯಂಸೇವಕರು ಹಾಗೂ ಪೋಷಕರು ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net