ಚೆನ್ನೈ- ಹೈದರಾಬಾದ್‌ಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್

Air India flight
Published on

ಮಂಗಳೂರು: ಇಲ್ಲಿನ ಅಂ.ರಾ. ವಿಮಾನ ನಿಲ್ದಾಣದಿಂದ ಏ.2ರಿಂದ ಹೈದರಾಬಾದ್‌ಗೆ ಹಾಗೂ ಏ.5ರಿಂದ ಚೆನ್ನೈಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಾಪ್ತಾಹಿಕ ಸಂಪರ್ಕ ಕಲ್ಪಿಸಲಿದೆ.

ಐಎಕ್ಸ್ 2915 ಬೆಳಗ್ಗೆ 6.10 ಕ್ಕೆ ಮಂಗಳೂರಿನಿಂದ ಹೊರಟು ಬೆಳಗ್ಗೆ 8 ಗಂಟೆಗೆ ಹೈದರಾಬಾದ್ ತಲುಪಲಿದೆ. ರಿಟರ್ನ್ ಪ್ಲೈಟ್ ಐಎಕ್ಸ್ 2913 ಸಂಜೆ 5.25 ಕ್ಕೆ ಹೈದರಾಬಾದ್‌ನಿಂದ ನಿರ್ಗಮಿಸಿ ಸಂಜೆ 7.15 ಕ್ಕೆ ಮಂಗಳೂರು ತಲುಪಲಿದೆ.

ವಿಮಾನ ಐಎಕ್ಸ್ 2917 ಮಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ಮಧ್ಯಾಹ್ನ 3.40 ಕ್ಕೆ ಚೆನ್ನೈ ತಲುಪಲಿದೆ. ಐಎಕ್ಸ್ 2918 ಸಂಜೆ 4.20 ಕ್ಕೆ ಚೆನ್ನೈಯಿಂದ ಹೊರಟು ಸಂಜೆ 6 ಗಂಟೆಗೆ ಮಂಗಳೂರು ತಲುಪಲಿದೆ.

ಏರ್ ಇಂಡಿಯಾ ಸಂಸ್ಥೆ 186 ಆಸನಗಳ ಬೋಯಿಂಗ್ 737-800 ಎನ್‌ಜಿ ವಿಮಾನವನ್ನು ಈ ಎರಡೂ ಮಾರ್ಗಗಳಲ್ಲಿ ನಿಯೋಜಿಸುತ್ತದೆ.

ಪ್ರಸ್ತುತ ಇಂಡಿಗೊ ಸಂಸ್ಥೆಯ 78 ಆಸನಗಳ ಎಟಿಆರ್ ವಿಮಾನಗಳು ಈ ಎರಡು ನಗರಗಳ ಜತೆ ಸಂಪರ್ಕ ಕಲ್ಪಿಸುತ್ತಿದೆ. ಇಂಡಿಗೊ ದೈನಂದಿನ ಎರಡು ಮತ್ತು ಹೈದರಾಬಾದ್‌ಗೆ ಮೂರು ಸಾಪ್ತಾಹಿಕ ವಿಮಾನಗಳು ಮತ್ತು ಚೆನ್ನೈಗೆ ಎರಡು ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಎರಡೂ ಹೊಸ ಮಾರ್ಗಗಳಿಗೆ ಬುಕಿಂಗ್ ಆರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net