

ಮಂಗಳೂರು: ಸಿಎಫ್‌ಎಎಲ್ ಮತ್ತು ಇಎಲ್‌ಸಿ ಡೆರಿಕ್‌ನ ಚೆಸ್ ಶಾಲೆಯ ಸಹಯೋಗದಲ್ಲಿ ಇಎಲ್‌ಸಿ ಕ್ಯಾಂಪಸ್‌ನಲ್ಲಿ ಚೆಸ್ ಫಿಯೆಸ್ಟಾ ಜರುಗಿತು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪಂದ್ಯಾವಳಿ ಉದ್ಘಾಟಿಸಿದರು. ಡೆರಿಕ್ ಚೆಸ್ ಶಾಲೆಯ ಸಂಸ್ಥಾಪಕ ಡೆರಿಕ್ ಪಿಂಟೋ, ಪ್ರಸನ್ನ ರಾವ್ ಉಪಸ್ಥಿತರಿದ್ದರು. 265 ಮಂದಿ ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ವಿಜೇತರಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು. ನಿಶಾಂತ್ ಡಿಸೋಜ ಅವರು ಮುಕ್ತ ವಿಭಾಗದಲ್ಲಿ ಗೆಲುವು ಸಾಧಿಸಿದ್ದು, ಅವರನ್ನು ಕೋಸ್ಟಲ್ ಚಾಂಪಿಯನ್ ಎಂದು ಘೋಷಿಸಲಾಯಿತು.