ಮಂಗಳೂರು ಸೆಂಟ್ರಲ್ ನಿಲ್ದಾಣ ಭಾಗದಲ್ಲಿ ಮೆಗಾ ಬ್ಲಾಕ್; ಸೆ.9 ತನಕ ರೈಲು ಯಾನ ವ್ಯವಸ್ಥೆಯಲ್ಲಿ ತುಸು ವ್ಯತ್ಯಯ

IMG-20230904-WA0007
Published on

ಮಂಗಳೂರು: ಮಂಗಳೂರು ರೈಲು ಸೆಂಟ್ರಲ್ ನಿಲ್ದಾಣದ ಹೆಚ್ಚುವರಿ ಫ್ಲಾಟ್‌ಫಾರ್ಮ್ ಕಾಮಗಾರಿ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸೆಪ್ಟಂಬರ್ 4ರಿಂದ 9ರ ತನಕ ಮೆಗಾ ಬ್ಲಾಕ್ ಆಗಲಿದೆ. ಪರಿಣಾಮ ಮಂಗಳೂರು ಮೂಲಕ ಹಾದುಹೋಗುವ ರೈಲುಗಳ ಪ್ರಯಾಣ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪಾಲಕ್ಕಾಡು ರೈಲ್ವೆ ವಿಭಾಗದ ಪ್ರಕಟಣೆ ತಿಳಿಸಿದೆ.
ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ಸ್ಪೆಷಲ್(06602) ಸೆ.5 ಮತ್ತು 6ರಂದು 30 ನಿಮಿಷ ವಿಳಂಬವಾಗಿ ಮಂಗಳೂರಿನಿಂದ ಪ್ರಯಾಣ ಆರಂಭಿಸಲಿದೆ. ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ (10107) ಸೆ.8ರಂದು ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ಪ್ರಯಾಣಿಸುವುದಿಲ್ಲ. ಮಡಗಾಂವ್‌ನಿಂದ ಆಗಮಿಸುವ ಈ ರೈಲು ತೋಕೂರು ನಿಲ್ದಾಣದಲ್ಲೇ ಪ್ರಯಾಣ ಪೂರ್ಣಗೊಳಿಸಲಿದೆ. ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ಮೆಮು ಸ್ಪೆಷಲ್ (10108) ಸೆ.8ರಂದು ಮಂಗಳೂರು ಸೆಂಟ್ರಲ್ ಮತ್ತು ತೋಕೂರು ನಿಲ್ದಾಣಗಳ ಮಧ್ಯೆ ಸಂಚರಿಸುವುದಿಲ್ಲ. ಈ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣ ಬದಲು ತೋಕೂರು ನಿಲ್ದಾಣದಿಂದ ನಿಗದಿತ ಸಾಯಂಕಾಲ 4.25ಕ್ಕೆ ಪ್ರಯಾಣ ಆರಂಭಿಸಲಿದೆ. ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಸ್ಪೆಷಲ್(06601) ಸೆ.8ರಂದು ಮಂಗಳೂರು ಜಂಕ್ಷನ್ ತನಕ ಮಾತ್ರ ಸಂಚರಿಸಲಿದೆ. ಮಂಗಳೂರು ಸೆಂಟ್ರಲ್-ಮಂಗಳೂರು ಜಂಕ್ಷನ್ ಸ್ಪೆಷಲ್ (06602) ಸೆ.9ರಂದು 30 ನಿಮಿಷ ವಿಳಂಬವಾಗಿ ಪ್ರಯಾಣ ಆರಂಭಿಸಲಿದೆ.

(((ಬಾಕ್ಸ್)))

ಕಾಮಗಾರಿ ಬಹುತೇಕ ಪೂರ್ಣ
ಮಂಗಳೂರು ಸೆಂಟ್ರಲ್ ನಿಲ್ದಾಣದ ಹೆಚ್ಚುವರಿ ಫ್ಲಾಟ್‌ಫಾರ್ಮ್ 4 ಮತ್ತು 5 ಕಾಮಗಾರಿ ಅಂತಿಮ ಹಂತದಲ್ಲಿದ್ದು, ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಶನ್ಸ್ ಕೆಲಸಗಳು ಮಾತ್ರ ಬಾಕಿ ಇವೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net