ಕಾರು, ಡ್ರಗ್ಸ್ ಸಹಿತ 7.13 ಲ.ರೂ. ಮೌಲ್ಯದ ಸೊತ್ತು ಸ್ವಾಧೀನ

drugs
Published on

ಮಂಗಳೂರು : ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದು ಕಾರು, ಡ್ರಗ್ಸ್ ಸಹಿತ 7.13 ಲ.ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.


ಅಶೋಕನಗರದ ಹಿಮಾನಿಷ್(27) ಬಂಧಿತ ಆರೋಪಿ. ಸೆ.3ರಂದು ಪೊಲೀಸರು ಪಡೀಲ್ ಜಂಕ್ಷನ್ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಾ ಒಂದು ಕಾರನ್ನು ನಿಲ್ಲಿಸಿ ಅನುಮಾನದಿಂದ ಅದರ ಚಾಲಕನನ್ನು ವಿಚಾರಿಸಿದಾಗ ಆತನ ಮಾತು ತೊದಲುತ್ತಿತ್ತು. ಆತನನ್ನು ಪ್ರಶ್ನಿಸಿದ ವೇಳೆ ಆತ ಕೇರಳ ಕಡೆಯಿಂದ ಬಂದಿದ್ದು ಡ್ರಗ್ಸ್ ಸೇವಿಸಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಕಾರನ್ನು ತಪಾಸಣೆಗೊಳಪಡಿಸಲಾಯಿತು. ಆಗ ಕಾರಿನಲ್ಲಿ 2.60 ಗ್ರಾಂ ತೂಕದ ಮಾದಕ ವಸ್ತುಗಳನ್ನು ಒಳಗೊಂಡಿರುವ ಪ್ಲಾಸ್ಟಿಕ್ ಕವರ್‌ಗಳು ಪತ್ತೆಯಾಗಿವೆ. ಡ್ರಗ್ಸ್, ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net