

ಮಂಗಳೂರು: ಮಹೇಶ್ ಮೋಟಾರ್ಸ್ ಮಾಲೀಕ ಜಯರಾಮ ಶೇಖ ಅವರ ಪುತ್ರ, ಉದ್ಯಮಿ ಪ್ರಕಾಶ್ ಶೇಖ (42) ಭಾನುವಾರ ಕದ್ರಿ ಕಂಬಳದ ಬಳಿ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಮಾನಸಿಕ ಒತ್ತಡ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪತ್ನಿ, ಪುತ್ರಿ, ತಂದೆ, ತಾಯಿಯನ್ನು ಅಗಲಿದ್ದಾರೆ.
ಫ್ಲಾೃಟ್‌ನಲ್ಲಿ ಪತ್ನಿ ಮತ್ತು ಪುತ್ರಿಯೊಂದಿಗೆ ವಾಸವಾಗಿದ್ದ ಅವರು ಬೆಳಗ್ಗೆ ತಮ್ಮ ರೂಮ್‌ಗೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೂ ಹೊರಗೆ ಬಂದಿರಲಿಲ್ಲ. ಪತ್ನಿ ಕರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಇದರಿಂದ ಸಂಶಯಗೊಂಡು ಬಾಗಿಲು ಒಡೆದು ನೋಡಿದಾಗ ಪ್ರಕಾಶ್ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ಬಸ್ ಜತೆಗೆ ಕಾಂಕ್ರೀಟ್ ಮಿಕ್ಸಿಂಗ್ ಲಾರಿ ಉದ್ಯಮವನ್ನೂ ನಡೆಸುತ್ತಿದ್ದರು. 75ಕ್ಕೂ ಅಧಿಕ ಬಸ್‌ಗಳು ಇವರ ಒಡೆತನದಲ್ಲಿದ್ದವು. ಹಲವಾರು ಬಸ್‌ಗಳನ್ನು ಬೇರೆ ಬೇರೆ ಕಡೆ ಖಾಸಗಿಯಾಗಿ ಗುತ್ತಿಗೆಗೆ ನೀಡಿದ್ದರು.