ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಖಾಸಗಿ ಬಸ್ ಸಿಬಂದಿ ಜಗಳ

crime
Published on

ಮಂಗಳೂರು: ನಗರದ ಉರ್ವಸ್ಟೋರ್ ಜಂಕ್ಷನ್‌ನಲ್ಲಿ ಸಿಟಿ ಮತ್ತು ಸರ್ವಿಸ್ ಬಸ್ ಸಿಬಂದಿಯ ನಡುವೆ ಜಗಳ ನಡೆದಿದ್ದು, ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಕಿನ್ನಿಗೋಳಿ ಕಟೀಲು ನಡುವೆ ಸಂಚರಿಸುವ ‘ಟೀನಾ’ ಹೆಸರಿನ ಸರ್ವಿಸ್ ಬಸ್‌ನಲ್ಲಿ ಮಸೂದ್ ಅಹಮ್ಮದ್ ಚಾಲಕನಾಗಿ ಮತ್ತು ಹಸನ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು, ಭಾನುವಾರ ಸಂಜೆಯ ಟ್ರಿಪ್‌ನಲ್ಲಿ 4.20ರ ವೇಳೆಗೆ ಕೊಟ್ಟಾರ ಚೌಕಿ ಕಡೆಗೆ ಬಂದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ‘ದೀದರ್’ ಹೆಸರಿನ ಸಿಟಿಬಸ್ ಚಾಲಕ ಓವರ್‌ಟೇಕ್ ಮಾಡಿಕೊಂಡು ಅಡ್ಡಾದಿದ್ಡಿಯಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಬಳಿಕ 4.30ರ ವೇಳೆಗೆ ಉರ್ವಸ್ಟೋರ್ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದಾಗ ಓವರ್ ಟೇಕ್ ಮಾಡಿಕೊಂಡು ಬಂದು ಅಡ್ಡಲಾಗಿ ಬಸ್ ತಂದು ನಿಲ್ಲಿಸಿದ್ದಾನೆ.

ಚಾಲಕ ಚೇತನ್ ಮತ್ತು ನಿರ್ವಾಹಕ ಮಹಮ್ಮದ್ ಹುಸೈನ್ ಸಪೀಲ್ ಬಸ್ಸಿನಿಂದ ಕೆಳಗಿಳಿದು ಬಂದು ಸಾರ್ವಜನಿಕರ ಎದುರಿನಲ್ಲಿ ಹಸನ್‌ಗೆ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ಬಳಿಕ ನಿರ್ವಾಹಕ ಸಪೀಲ್ ಮರದ ಹಿಡಿಯಿರುವ ದೊಡ್ಡ ಬ್ರಶ್‌ನಲ್ಲಿ ಚಾಲಕ ಕುಳಿತುಕೊಳ್ಳುವ ಬಲಬದಿಯ ಸೈಡ್ ಮಿರರ್ ಮತ್ತು ಸೈಡ್ ಗ್ಲಾಸ್‌ನ್ನು ಒಡೆದು ಜಖಂಗೊಳಿದ್ದಾನೆ. ಇದರಿಂದಾಗಿ ಸುಮಾರು 4,000 ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net