ಬಂಟ್ಸ್ ಹಾಸ್ಟೆಲ್ ಮೊಬೈಲ್ ೆನ್ ಸ್ಟೋರ್ ಒಂದರ ಉದ್ಯೋಗಿಯಿಂದಲೇ 2.35 ಲಕ್ಷ ರೂ. ಮೌಲ್ಯದ ಮೊಬೈಲ್, ನಗದು ಕಳವು

FIR-2
Published on

ಮಂಗಳೂರು: ಮೊಹಮ್ಮದ್ ಶಿಬಾನ್ ಎಂಬಾತ 2,36,510 ಮೌಲ್ಯದ 7 ಮೊಬೈಲ್ ೆನ್ ಮತ್ತು ಅಂಗಡಿಯ ಕ್ಯಾಶ್ ಡ್ರಾಯರ್‌ನಲ್ಲಿದ್ದ 58,100 ರೂ. ನಗದು ಕಳವು ಮಾಡಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇಲ್ಲಿನ ಜಾನ್ವಿ ಪ್ಲಾಝಾದಲ್ಲಿರುವ ಮೊಬೈಲ್ ಅಂಗಡಿಯ ಸ್ಟೋರ್ ಮ್ಯಾನೇಜರ್ ಸಂದೇಶ್ ಶೆಟಿ ಎನ್ನುವವರು ರಜೆಯಲ್ಲಿ ತೆರಳುವ ಕಾರಣಕ್ಕಾಗಿ ಸ್ಟೋರ್‌ನ ಸಂಪೂರ್ಣ ಜವಾಬ್ದಾರಿಯನ್ನು ಮೊಹಮ್ಮದ್ ಶಿಬಾನ್‌ಗೆ ವಹಿಸಿದ್ದರು. ಆದರೆ ಆತ ಕಂಪೆನಿಯ ಕೆಲಸವನ್ನು ಸರಿಯಾಗಿ ನಿರ್ವಹಿಸದೇ ಇದ್ದುದರಿಂದ ಅವರು ರಜೆಯನ್ನು ಅರ್ಧದಲ್ಲಿ ಮೊಟಕುಗೊಳಿಸಿ ಬಂದಾಗ ಸ್ಟೋರಿನ ಬಾಗಿಲು ಹಾಕಲಾಗಿತ್ತು.


ಈ ಬಗ್ಗೆ ಕಂಪೆನಿಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಅನುಮತಿ ಮೇರೆಗೆ ಬಾಗಿಲನ್ನು ತೆರೆದಾಗ ಅಂಗಡಿಯ ಒಳಗಿನ ಸಾಮಾನುಗಳು ಅಸ್ತವ್ಯಸ್ತವಾಗಿತ್ತು. ಅವರು ಬೆಂಗಳೂರಿನಿಂದ ಬಂದು ಅಡಿಟ್ ಮಾಡಿ ಪರಿಶೀಲಿಸಿದಾಗ ಅಂಗಡಿಯಲ್ಲಿದ್ದ ಒಟ್ಟು 2,36,510 ರೂ. ಮೌಲ್ಯದ 7 ಮೊಬೈಲ್ ೆನ್‌ಗಳು ಮತ್ತು ಅಂಗಡಿಯ ಕ್ಯಾಶ್ ಡ್ರಾಯರ್ ನಲ್ಲಿದ್ದ ನಗದು 58,100 ರೂ. ಇಲ್ಲದಿರುವುದು ಕಂಡುಬಂದಿತ್ತು.


ಈ ಬಗ್ಗೆ ಮೊಹಮ್ಮದ್ ಶಿಬಾನ್‌ಗೆ ಕರೆ ಮಾಡಿ ವಿಚಾರಿಸಿದಾಗ ತಾನು ತೆಗೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದು, ಅವುಗಳನ್ನು ವಾಪಾಸು ನೀಡುವುದಾಗಿ ಹೇಳಿದ್ದ. ಆದರೆ ವಾಪಾಸು ನೀಡದಿರುವದರಿಂದ ಸಂದೀಪ್ ಶೆಟ್ಟಿ ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net