ಮಂಗಳೂರು ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿ : 2.27 ಕೋಟಿ ರೂ. ನಿವ್ವಳ ಲಾಭ

mng-14sep-building
Published on


ಮಂಗಳೂರು : ಮಂಗಳೂರು ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿ ಲಿ. ಇದರ 86ನೇ ವರ್ಷದ ವಾರ್ಷಿಕ ಮಹಾಸಭೆ ನಗರದ ಲಾಲ್‌ಬಾಗ್‌ನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಪದ್ಮನಾಭ ಕೆ. 2023-24 ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪರಿಶೋಧಿತ ಲೆಕ್ಕ ಪತ್ರಗಳನ್ನು ಸಭೆಗೆ ಮಂಡಿಸಿದರು. ಶೇ. 18 ರಂತೆ ಡಿವಿಡೆಂಡ್ ಘೋಷಿಸಲಾಯಿತು.
ಪ್ರಸ್ತುತ ಸಂಘವು 4.36 ಕೋಟಿ ರೂ.ಪಾಲು ಬಂಡವಾಳ, 60.58 ಕೋಟಿ ರೂ. ಠೇವಣಿ , 46.52ಕೋಟಿ ರೂ.ಸದಸ್ಯರಿಗೆ ನೀಡಿರುವ ಹೊರ ಸಾಲಗಳು ಹಾಗೂ 17.04 ಕೋಟಿ ರೂ. ವಿವಿಧ ಬ್ಯಾಂಕ್‌ಗಲ್ಲಿ ಹೊಂದಿರುವ ಧನ ವಿನಿಯೋಗ ಗಳಿದೆ. 2023-24 ನೇ ಸಾಲಿನಲ್ಲಿ ಸಂಘದ ಸದಸ್ಯರ, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಹಕಾರದಿಂದ ವರದಿ ವರ್ಷದಲ್ಲಿ 111 ಕೋಟಿ ರೂ. ವ್ಯವಹಾರ ನಡೆಸಿದ್ದು, 2.27 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಸಂಘದ ನಿರ್ದೇಶಕರಾದ ಲೋಕನಾಥ ಶೆಟ್ಟಿ, ಜನಾರ್ಧನ ದೇವಾಡಿಗ, ಬಿ.ಪಿ.ದಿವಾಕರ್, ಚರಣ್‌ರಾಜ್ ಉಳ್ಳಾಲ್, ದಯಾಮಣಿ ವಿ. ಕೋಟ್ಯಾನ್, ಜನಾರ್ಧನ ಬಿ, ಸುಧಾಕರ ಕರ್ಕೇರ, ಸದಾನಂದ ಅಮೀನ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಪ್ರಭಾಮಾಲಿನಿ ಸ್ವಾಗತಿಸಿ, ನಿರ್ದೇಶಕ ಜಿನ್ನಪ್ಪ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net