ಕ್ರಿಸ್ತ ಜಯಂತಿ ಜುಬಿಲಿ 2025 ಸಿದ್ಧತೆಗೆ ಚಾಲನೆ

mng--26 Nov Bishop
Published on

ಮಂಗಳೂರು: ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸುಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥವಾಗಿ ‘ಕ್ರಿಸ್ತ ಜಯಂತಿ ಜುಬಿಲಿ 2025’ ಸಂಭ್ರಮಾಚರಣೆಗೆ ಪೂರ್ವ ಸಿದ್ಧತೆಗಳಿಗೆ ಚಾಲನೆ ನಡೆಯುತ್ತಿದ್ದು, ಮಂಗಳೂರಿನ ರೋಮನ್ ಕಥೋಲಿಕ್ ಧರ್ಮಕ್ಷೇತ್ರದಲ್ಲಿಯೂ ಎರಡು ವರ್ಷಗಳ ಪೂರ್ವ ತಯಾರಿಗಳಿಗೆ ಭಾನುವಾರ ಚಾಲನೆ ನೀಡಲಾಯಿತು.


ನಗರದ ಹೋಲಿ ರೋಜರಿ ಕೆಥೆಡ್ರಲ್‌ನಲ್ಲಿ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾರವರು ‘ಭರವಸೆಯ ಯಾತ್ರಿಕರು’ ಎಂಬ ಧ್ಯೇಯವನ್ನು ಒಳಗೊಂಡ ಜುಬಿಲಿ ಲಾಂಛನದ ಅನಾವರಣದೊಂದಿಗೆ ವಿಧ್ಯುಕ್ತ ಚಾಲನೆ ನೀಡಿದರು.


ಈ ಸಂದರ್ಭ ಕೆಥೆಡ್ರಲ್‌ನ ರೆಕ್ಟರ್ ಾ. ಆಲ್ಫ್ರೆಡ್ ಜೆ. ಪಿಂಟೊ, ಾ.ವಿನೋದ್ ಲೋಬೋ, ಾ.ಸಂತೋಷ್ ಡಿಸೋಜ, ಾ.ಹ್ಯಾರಿ ಡಿಸೋಜ, ಾ.ತ್ರಿಶಾನ್ ಡಿಸೋಜ, ಡಾ.ಜೋನ್ ಡಿಸಿಲ್ವ ಉಪಸ್ಥಿತರಿದ್ದರು.


ಮಂಗಳೂರು ಧರ್ಮಪ್ರಾಂತ್ಯದಾದ್ಯಂತ ಎಲ್ಲ ಚರ್ಚ್‌ಗಳಲ್ಲಿ ಏಕಕಾಲದಲ್ಲಿ ಈ ಉದ್ಘಾಟನಾ ಸಮಾರಂಭವನ್ನು ನಡೆಸಿ ಜುಬಿಲಿ ಲಾಂಛನವನ್ನು ಅನಾವರಣಗೊಳಿಸಲಾಯಿತು. ಸಮರ್ಪಿತ ಪ್ರಾರ್ಥನೆಗಳನ್ನು ಪಠಿಸಿ, ಜುಬಿಲಿ ಗೀತೆಯನ್ನು ಹಾಡಿದರು. ಪ್ರತಿ ಚರ್ಚ್‌ಗಳಲ್ಲಿ ಧರ್ಮಗುರುಗಳು ಲಾಂಛನದ ಮಹತ್ವವನ್ನು ಮತ್ತು ಅದರ ಸಂಕೇತವನ್ನು ಸಭೆಗೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net