

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ ಜ.5 ರಂದು ನಡೆಯಲಿದ್ದು, ಇದರ ಬಗ್ಗೆ ಪೂರ್ವಬಾವಿ ಸಭೆಯನ್ನು ಬಿಷಪ್ ಹೌಸ್‌ನಲ್ಲಿ ನಡೆಸಲಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ವಹಿಸಿ, ಕಾರ್ಯಕ್ರಮದ ಬಗ್ಗೆ ರೂಪು ರೇಖೆಯನ್ನು ವಿವರಿಸಿದರು. ಧರ್ಮಪ್ರಾತ್ಯದ ಶ್ರೇಷ್ಠ ಗುರು ವಂ. ಪಾ. ಮ್ಯಾಕ್ಸಿಂ ನೊರೊನ್ಹಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ಟಲಿನೋ, ಕಥೋಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.
ರೋಯ್ ಕ್ಯಾಸ್ಟಲಿನೋ ಮೆರವಣಿಗೆಯ ಬಗ್ಗೆ ಸ್ವಯಂಸೇವಕರ ಸೇವೆಯ ಬಗ್ಗೆ ರೂಪು ರೇಖೆ ನೀಡಿ ಪ್ರತಿ ಚರ್ಚಿನ ಸ್ವಯಂ ಸೇವಕರು ಅವರು ನಿಲ್ಲುವ ಸ್ಥಳವನ್ನು ತಿಳಿಸಿದರು.
ಈ ಪರಮ ಪ್ರಸಾದದ ಮೆರವಣಿಗೆಯು ಆ ದಿನ ಸಂಜೆ 3 ಗಂಟೆಗೆ ಮಿಲಾಗ್ರಿಸ್ ಚರ್ಚಿನಲ್ಲಿ ಬಲಿಪೂಜೆಯೊಂದಿಗೆ ಪ್ರಾರಂಭಗೊಳ್ಳಲಿದ್ದು 4.30 ಕ್ಕೆ ಮಿಲಾಗ್ರಿಸ್ ಚರ್ಚಿನಿಂದ ಪಾಂಡೇಶ್ವರದ ರೊಸಾರಿಯೊ ಚರ್ಚಿಗೆ ಮೆರವಣಿಗೆ ಮೂಲಕ ಪರಮ ಪ್ರಸಾದ ಕೊಂಡೊಯ್ಯಲಾಗುವುದು. ಚರ್ಚಿನ ತೆರೆದ ಮೈದಾನದಲ್ಲಿ ಪ್ರವಚನ ಹಾಗೂ ಇತರ ಕಾರ್ಯಕ್ರಮಗಳು ಜರಗಲಿರುವುದು.