ಕ್ರಿಸ್ಮಸ್ ಹಬ್ಬ ನೆಮ್ಮದಿಯ ಭರವಸೆ ಮೂಡಿಸಲಿ- ಮಂಗಳೂರು ಬಿಷಪ್ ಪೀಟರ್ ಪೌಲ್ ಸಲ್ದಾನ

mng-21dec-bishop
Published on




ಮಂಗಳೂರು : ಕ್ರಿಸ್ಮಸ್ ಹಬ್ಬ ಜನ ಸಮುದಾಯದ ನಡುವೆ ಶಾಂತಿ, ಪ್ರೀತಿ, ನೆಮ್ಮದಿಯ ಭರವಸೆ ಮೂಡಿಸುವಂತಾಗಲಿ ಎಂದು ಮಂಗಳೂರು ಬಿಷಪ್ ಪೀಟರ್ ಪೌಲ್ ಸಲ್ದಾನ ಹೇಳಿದರು
ನಗರದ ಕೊಡಿಯಾಲಬೈಲ್ನ ಬಿಷಪ್ ಹೌಸ್‌ನಲ್ಲಿ ಬುಧವಾರ ಕ್ರಿಸ್ಮಸ್ ಸಂದೇಶ ನೀಡಿದ ಅವರು ‘ ಶೋಷಿತ ಸಮುದಾಯದವರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸಿದ ಏಸು ಕ್ರಿಸ್ತರ ಜನ್ಮ ದಿನವಾದ ಕ್ರಿಸ್ಮಸ್ ಸಂದರ್ಭ ನಾಡಿನ ಜನರ ಮನದಲ್ಲಿ ಸಂತಸ ನೆಲೆಸಲಿ
ಕ್ರಿಸ್ಮಸ್ ಹಬ್ಬ ಎಲ್ಲರೂ ಸಂತೋಷದಿಂದ ಆಚರಿಸುವ ಹಬ್ಬವಾಗಲಿ ಎಂದರು.
ಶಾಂತಿ ಮೊದಲು ನಮ್ಮ ಹೃದಯದಲ್ಲಿ ಮೂಡಿ ಬರಬೇಕು. ಬಳಿಕ ನೆರೆಹೊರೆಯವರು ಸೇರಿದಂತೆ ಎಲ್ಲೆಡೆ ಪಸರಿಸಬೇಕು. ಮನುಷ್ಯರ ನಡುವೆ ಜಾತಿ,ಮತ, ಧರ್ಮವನ್ನು ಮೀರಿ ಅಲ್ಪ ಸಂಖ್ಯಾತರು,ಬಹು ಸಂಖ್ಯಾತರು ಎಂದೆಣಿಸದೆ ಪರಸ್ಪರ ಗೌರವದೊಂದಿಗೆ ಬದುಬೇಕಾಗಿದೆ.ಈ ಜಗತ್ತನ್ನು ಸರ್ವ ಜನರ ಶಾಂತಿಯ ತೋಟವಾಗಿ ಪರಿವರ್ತಿಸಬೇಕಾಗಿದೆ.ಇತರರ ಬದುಕಿನಲ್ಲಿ ಹೊಸ ದೀಪ ಹಚ್ಚಬೇಕಾಗಿದೆ ಎಂದು ಬಿಷಪ್ ಹೇಳಿದರು.
ಜಗತ್ತಿನಲ್ಲಿ ಧರ್ಮ ಹಾಗೂ ಜಾತಿ ಆಧಾರಿತ ತಾರತಮ್ಯ ಹಿಂಸೆ ತಾಂಡವವಾಡುತ್ತಿದೆ. ಯುದ್ಧ, ಸಾವು,ನೋವು ದುರ್ಘಟನೆಗಳೇ ಪ್ರಮುಖ ಸುದ್ದಿಗಳಾಗಿವೆ. ಪೋಪ್ ಫ್ರಾನ್ಸಿಸ್ ಅವರ ಮಾತುಗಳ ಪ್ರಕಾರ ಮೂರನೆ ಜಾಗತಿಕ ಯುದ್ಧ ಸದ್ದಿಲ್ಲದೆ ನಡೆಯುತ್ತಿದೆ. ಆತ್ಮಹತ್ಯೆಗಳು
ಏರಿಕೆಯಾಗುತ್ತಿದೆ. ಹತಾಶೆ, ನಿರಾಸೆಯೆಡೆಗೆ ನಾವೆಲ್ಲ ಮುಖ ಮಾಡಿದಂತೆ ಕಾಣುತ್ತದೆ. ಇದೇ ಸಂದರ್ಭದಲ್ಲಿ ನಾವು ಯೇಸುಕ್ರಿಸ್ತರ ಹುಟ್ಟು ಹಬ ವನ್ನು ಆಚರಿಸುತ್ತಿದ್ದೇವೆ. ಈ ಹಬ್ಬ ದೇವರು ನಮ್ಮೊಂದಿಗೆ ಇದ್ದಾರೆ ಎನ್ನುವ ಅನುಭವ ನೀಡುತ್ತದೆ ಎಂದು ಅವರು ಹೇಳಿದರು.
ಕೋವಿಡ್ ಬಗ್ಗೆ ಅನಗತ್ಯವಾಗಿ ಭಯ ಹುಟ್ಟಿಸಬೇಕಾಗಿಲ್ಲ.ಎಚ್ಚರಿಕೆ ವಹಿಸಿ ಆಚರಿಸೋಣ.
ಧರ್ಮಗುರು ಮೊ.ಮ್ಯಾಕ್ಸಿಂ ನೊರೊನ್ಹಾ, ಜೆ.ಬಿ.ಸಲ್ಡಾನ, ರಾಯ್ ಕ್ಯಾಸ್ಟೋಲಿನೊ, ಪಾಲನಾ ಮಂಡಳಿಯ ಕಾರ್ಯದರ್ಶಿ ಡಾ.ಜಾನ್ ಡಿಸಿಲ್ವಾ, ಫಾ.ತ್ರಿಶಾನ್ ಡಿಸೋಜ, ಫಾ.ಅನಿಲ್ ಫೆರ್ನಾಂಡೀಸ್, ಫಾ.ರೂಪೇಶ್ ಮಾಡ್ತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net