ಬಿರುವೆರ್ ಕುಡ್ಲದಿಂದ 40 ಸಾವಿರ ರೂ. ನೆರವು ವಿತರಣೆ

mng--27 Aug Biruver Kudla
Published on

ಮಂಗಳೂರು: ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಇದರ ಸ್ಪಂದನ ತಂಡವು ಬಡ ವರ್ಗದ ಚಿಕಿತ್ಸೆಗಾಗಿ ಕಳೆದ ಹಲವಾರು ವರ್ಷಗಳಿಂದ ಮಾನವೀಯ ನೆಲೆಯಲ್ಲಿ ನೆರವು ನೀಡುತ್ತಾ ಬರುತ್ತಿರುವುದು ಇತರ ಸಂಘಟನೆಗಳಿಗೆ ಮಾದರಿ ಎಂದು ಕುದ್ರೋಳಿ ಶ್ರೆ ಗೋಕರ್ಣ ನಾಥ ಕ್ಷೇತ್ರದ ಆಡಳಿತ ಮೊಕ್ತೇಸರ ಎಚ್.ಎಸ್. ಸಾಯಿರಾಂ ಹೇಳಿದರು.


ಬಿರುವೆರ್ ಕುಡ್ಲದ ವತಿಯಿಂದ ಬಾಲಕೃಷ್ಣ ಎಂಬವರಿಗೆ ಆರೋಗ್ಯ ಚಿಕಿತ್ಸೆಗೆ ಧನಸಹಾಯ ವಿತರಿಸಿ ಮಾತನಾಡಿದರು.
ಬ್ರಹ್ಮಶ್ರೆ ನಾರಾಯಣಗುರುಗಳ ತತ್ವಾದರ್ಶದಂತೆ ಜಾತಿ ಮತ ಬೇಧವೆನ್ನೆದೆ ಬಿರುವೆರ್ ಕುಡ್ಲ ಸಂಘಟನೆ ಬಡವರಿಗೆ ನೆರವು ನೀಡುತ್ತಾ ಬರುತ್ತಿದೆ. ಕರೊನಾ ಸಂದರ್ಭ ಬಿರುವೆರ್ ಕುಡ್ಲ ಸಂಘಟನೆಯು ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್ ಬಾಗ್ ಅವರ ನೇತೃತ್ವದಲ್ಲಿ, ಸರ್ಕಾರದ ಜತೆ ಕೈ ಜೋಡಿಸಿ ಉಚಿತ ಆಂಬುಲೆನ್ಸ್ ಸೇವೆ ನೀಡಿದೆ. ಶಿಕ್ಷಣಕ್ಕಾಗಿ ಸಹಾಯಧನ ನೀಡಿದೆ. ಇಂತಹ ಸಂಘಟನೆಗಳಿಗೆ ಸದಾ ಪ್ರೋತ್ಸಾಹ ನೀಡುವ ಅಗತ್ಯವಿದೆ. ಅರ್ಹವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ತನ್ನದಾಗಿಸಿಕೊಂಡಿದೆ ಎಂದು ಶ್ಲಾಸಿದರು.


ಬಿಲ್ಲವ ಮುಖಂಡ ಡಾ.ಬಿ.ಜಿ ಸುವರ್ಣ, ವಿನೀತ್, ಬಿರುವೆರ್ ಕುಡ್ಲ ಸಂಘಟನೆಯ ಪ್ರಮುಖರಾದ ರಾಕೇಶ್ ಬಳ್ಳಾಲ್ ಬಾಗ್, ಕಿಶೋರ್ ಬಾಬು, ಲೋಹಿತ್ ಗಟ್ಟಿ ಕುಂಪಲ, ರೇನಿತ್ ರಾಜ್ ಅಶೋಕ್ ನಗರ, ಸಂಕೇತ್, ಕಿರಣ್ ಬಂಟ್ವಾಳ, ಪ್ರಾಣೇಶ್ ಬೋಳೂರು ,ಓಸ್ವಾಲ್ಡ್ ಡಿಸೋಜ, ಯಶು ಬಲ್ಲಾಳ್ ಭಾಗ್, ಮನೋಜ್ ಡಿಸೋಜ, ರೋಹಿದಾಸ್ ಕದ್ರಿ, ಲತೀಶ್ ವಾಮಂಜೂರು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net