ಶೋರೂಂನಿಂದ ಬೈಕ್, ಸ್ಕೂಟರ್ ಕಳವು

crime
Published on

ಮಂಗಳೂರು : ನಗರದ ಸೈಂಟ್ ಆ್ಯಗ್ನೆಸ್ ಸಮೀಪದ ದ್ವಿಚಕ್ರ ವಾಹನಗಳ ಶೋರೂಂನಿಂದ ಬೈಕ್ ಮತ್ತು ಸ್ಕೂಟರ್ ಕಳವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.


ಗುರುವಾರ ಬೆಳಗ್ಗೆ 8 ಗಂಟೆಗೆ ಹೌಸ್ ಕೀಪಿಂಗ್ ಕೆಲಸದ ಮಹಿಳೆ ಬಂದಾಗ ಶೋರೂಂನ ಒಳಗೆ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿತ್ತು. ಈ ಬಗ್ಗೆ ಆಕೆ ಶೋರೂಂನವರಿಗೆ ತಿಳಿಸಿದ್ದಾರೆ. ಅವರು ಬಂದು ನೋಡುವಾಗ ಶೋರೂಂನ ಹಿಂಬಾಗಿಲಿನ ಚಿಲಕವನ್ನು ಮೀಟಿ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು. ಡಿಸ್‌ಪ್ಲೇಗೆ ಇಟ್ಟ ಬೈಕ್ ಮತ್ತು ಸ್ಕೂಟರ್‌ಗಳ ಪೈಕಿ ಒಂದು ಬೈಕ್ ಮತ್ತು ಬಿಳಿ ಬಣ್ಣದ ಆ್ಯಕ್ಟಿವಾ ಡಿಎಲ್‌ಎಕ್ಸ್ ಸ್ಕೂಟರ್‌ನ್ನು ಕಳವು ಮಾಡಿರುವುದು ಕಂಡುಬಂದಿದೆ. ಬುಧವಾರ ಸಂಜೆ 7ರಿಂದ ಮರುದಿನ ಬೆಳಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಕಳವು ನಡೆದಿದೆ. ಕಳವಾದ ವಾಹನಗಳ ಒಟ್ಟು ಅಂದಾಜು ಮೌಲ್ಯ 1,72,084 ರೂ.ಗಳು ಎಂದು ಕದ್ರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net