ಮಂಗ್ಳೂರಲ್ಲಿ ಭಂಡಾರಿ ಸಮುದಾಯ ಭವನ ನಿರ್ಮಾಣ: ಸಂಘದ ಮಹಾಸಭೆಯಲ್ಲಿ ಸದಾಶಿವ ಸಕಲೇಶಪುರ ಸಲಹೆ

mng- sep 27- bhandari samaja
Published on

ಮಂಗಳೂರು : ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ - ಸನ್ಮಾನ ಸಮಾರಂಭ, ಸಹಾಯಧನ ವಿತರಣೆ ಸಮಾರಂಭ ನಗರದ ಕದ್ರಿ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ಸಂಘದ ಅಧ್ಯಕ್ಷ ರಮಾನಾಥ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು .

ಮಂಗಳೂರಿನಲ್ಲಿ ಭಂಡಾರಿ ಸಮುದಾಯ ಭವನ ನಿರ್ಮಾಣ ಮಾಡಲು ಸಮಾಜದ ಮುಖಂಡರು ಪ್ರಯತ್ನಿಸಬೇಕು. ಸಮಾಜದ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಭಂಡಾರಿ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಹೇಳಿದರು .


ಬಂಟ್ವಾಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಗೋಪಾಲ ಭಂಡಾರಿ ಪುಣ್ಕೆದಡಿ , ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಧರ ಭಂಡಾರಿ ಬಿರ್ತಿ, ಕಚ್ಚೂರು ವಾಣಿ ಮಾಸಪತ್ರಿಕೆಯ ಸಂಪಾದಕ ರಮೇಶ್ ಭಂಡಾರಿ ಪಾಂಗಾಳ , ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಜ್ಯೋತಿ ಕೆ. ಆರ್., ಯುವ ವೇದಿಕೆ ಅಧ್ಯಕ್ಷ ನಿತ್ಯಾನಂದ ಭಂಡಾರಿ ತಲಪಾಡಿ ಮತ್ತು ಭಂಡಾರಿ ಸ್ವಯಂ ಸೇವಕ ಸಂಘದ ಅಧ್ಯಕ್ಷೆ ಬಬಿತಾ ಲತೀಶ್ ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು .


ನಿವೃತ್ತ ಯೋಧ ನವೀನ್ ಚಂದ್ರ ಭಂಡಾರಿ ಹೊಸಬೆಟ್ಟು, ವೆನ್ಲಾಕ್ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಜ್ಯೋತಿ ಕೆ.ಆರ್., ಮಣಿಪಾಲ ಪೊಲೀಸ್ ಠಾಣೆಯ ಪ್ರೊಬೆಷನರಿ ಸಬ್ಇನ್ಸ್ಪೆಕ್ಟರ್ ನಿಧಿ ಬಿ.ಎನ್. ಮತ್ತು ಡಾ.ಮಹಿಮಾ ಸಾಗರ್ ಭಂಡಾರಿ ಹಾಗೂ ಈ ಬಾರಿಯ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಕುಳಾಯಿ , ಉಪಾಧ್ಯಕ್ಷರಾದ ವಾಣಿ ಎಸ್. ಭಂಡಾರಿ ಮತ್ತು ಸಂಜೀವ ಭಂಡಾರಿ ಮೂಡುಶೆಡ್ಡೆ ಕೋಶಾಧಿಕಾರಿ ಸುರೇಶ್ ಮರೋಳಿ ಹಾಗೂ ರೂಪಾ ಮುರಳೀಧರ್ ಉಪಸ್ಥಿತರಿದ್ದರು.


ರಾಮ್ ಗಣೇಶ್ ದಂಬೆ ಸ್ವಾಗತಿಸಿದರು. ಕಾರ್ಯದರ್ಶಿ ಜನಾರ್ದನ ಬಿ. ಪಡೀಲ್ ವರದಿ ಮಂಡಿಸಿದರು. ಧನ್ಯಾ ಸುರತ್ಕಲ್ ಮತ್ತು ಅನಿತಾ ಅಮರನಾಥ್ ಕಾರ್ಯಕ್ರಮ ನಿರೂಪಿಸಿದರು. ಪದ್ಮನಾಭ ಎಮ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net