ಬಿಜಿಎಸ್ ಎಜ್ಯುಕೇಶನ್ ಸೆಂಟರ್‌ನ ವತಿಯಿಂದ ಬಾಲಮುಕುಂದ ಮುದ್ದು ಕೃಷ್ಣ ಸ್ಪರ್ಧೆ 2024

mng--24 Aug BGS
Published on

ಮಂಗಳೂರು: ಶ್ರೀ ಕೃಷ್ಣನ ವಿಚಾರಧಾರೆಗಳು ಸಾರ್ವಕಾಲಿಕವಾಗಿ ಜೀವಂತಿಕೆಯನ್ನು ಉಳಿಸಿಕೊಂಡಿದೆ. ವ್ಯಕ್ತಿಯು ಜೀವನದ ಪರಮ ಗುರಿಯನ್ನು ಹೊಂದಲು ಕೃಷ್ಣನ ಉಪದೇಶಾಮೃತವು ಅಮೃತತ್ವದೆಡೆಗೆ ಕೊಂಡುಹೋಗಲು ಸಹಕಾರಿಯಾಗಿದೆ ಎಂದು ಬಿಜಿಎಸ್ ಸಂಸ್ಥೆಯ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.


ಬಿಜಿಎಸ್ ಎಜ್ಯುಕೇಶನ್ ಸೆಂಟರ್‌ನ ವತಿಯಿಂದ ನಡೆದ ಬಾಲಮುಕುಂದ ಮುದ್ದು ಕೃಷ್ಣ ಸ್ಪರ್ಧೆ 2024ನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ದೇಶದಲ್ಲಿ ಧರ್ಮವು ಅವನತಿ ಹೊಂದಿದಾಗ, ದುರ್ಜರನರನ್ನು ನಾಶ ಮಾಡಿ ಸಜ್ಜನರನ್ನು ಕಾಪಾಡಿ ಧರ್ಮಸಂಸ್ಥಾಪನೆ ಮಾಡಲು ಪರಮಾತ್ಮ ಮತ್ತೆ ಹುಟ್ಟಿ ಬರುತ್ತಾನೆ. ನಮ್ಮಲ್ಲಿ ಒಳ್ಳೆಯ ಗುಣಗಳಿದ್ದಾಗ ನಾವು ದೇವರನ್ನು ಕಾಣಲು ಸಾಧ್ಯವಾಗುತ್ತದೆ. ಶ್ರೀಕೃಷ್ಣನ ಬಾಲಲೀಲೆಯನ್ನು ಸ್ಮರಿಸುವ ನೆಲೆಯಿಂದ ನಮ್ಮ ಮಕ್ಕಳ ಮನೋಭೂಮಿಕೆಯನ್ನು ಸಂಸ್ಕಾರವಾಗಿಸಬೇಕು. ಮಕ್ಕಳಲ್ಲಿ ಕೃಷ್ಣನ ವಿಚಾರಧಾರೆಗಳು ಸರ್ವದ ನೆಲೆನಿಂತಲ್ಲಿ ಮನ-ಬುದ್ಧಿ-ಚಿತ್ತವು ಗುಣಾತ್ಮಕವಾಗಿ ರೂಪುಗೊಳ್ಳುವುದಕ್ಕೆ ಸಾಧ್ಯವಾಗುತ್ತದೆಂದರು.


ಬಿಜಿಎಸ್ ಸಂಸ್ಥೆಯ ವ್ಯವಸ್ಥಾಪಕ ಸುಬ್ಬ ಕಾರಡ್ಕ ಅವರು ಮಾತನಾಡಿ, ಪಾಲಕರು ಮಕ್ಕಳಿಗೆ ಮೌಲ್ಯವನ್ನು ಕಲಿಯುವ ಅವಕಾಶವನ್ನು ಕಲ್ಪಿಸಿಕೊಡಬೇಕು. ರಾಮಾಯಣ ಮಹಾಭಾರತದ ಕಥೆಗಳು ತುಂಬಾ ಮೌಲ್ಯಯುತವಾದ ಅಂಶಗಳನ್ನು ಒಳಗೊಂಡಿದ್ದು, ಅದನ್ನು ಮಕ್ಕಳು ಅನುಸರಿಸುವಂತಾಗಬೇಕು ಎಂದರು.


ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಸಿ, ಬಿಜಿಎಸ್ ಎಜ್ಯುಕೇಶನ್‌ನ ಪ್ರಾಂಶುಪಾಲೆ ರೇಷ್ಮಾ ಸಿ. ನಾಯರ್, ಬಿಜಿಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರಿಯಾ ಬಂಗೇರ ಉಪಸ್ಥಿತರಿದ್ದರು. ಸರ್ವಮಂಗಲ ಸ್ವಾಗತಿಸಿ, ಆಶಾಲತಾ ವಂದಿಸಿದರು. ಎನ್.ರಶ್ಮಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net