ಬಿಜೈ ಗಾಂಜಾ ಸೇವನೆ ಇಬ್ಬರ ಬಂಧನ

drugs
Published on

ಮಂಗಳೂರು: ಬಿಜೈ ಬಳಿ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.


ಕೇರಳ ಕೋಯಿಕ್ಕೋಡ್‌ನ ವಿಲ್ಯಪಳ್ಳಿ ನೌಶೀನ್ ಬಾನ್ (20), ಎರ್ನಾಕುಲಂ ಆಲುವ ತಾನಿಪಿಲ್ಲಿಯ ಇನೋಸ್ ನೋಬಿ (20) ಬಂಧಿತರು.
ಸಿಗರೇಟ್ ಸೇದುತ್ತಾ ನಿಂತಿದ್ದವರನ್ನು ಗಾಂಜಾ ತುಂಬಿಸಿ ಸೇವನೆ ಮಾಡುತ್ತಿರುವ ಸಂಶಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net