ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕ್ ಮಾಡಿದ್ದ ಸೈಕಲ್ ಕಳವು

crime
Published on


ಮಂಗಳೂರು: ನಗರದ ಬಿಜೈ ಕಾಪಿಕಾಡ್‌ನ ಗ್ರೇಸ್ ಟವರ್ಸ್ ಕಟ್ಟಡದ ಬಳಿಯಲ್ಲಿ ಪಾರ್ಕ್ ಮಾಡಿದ್ದ ಸುಮಾರು 21 ಸಾವಿರ ರೂ. ಮೌಲ್ಯದ ಸೈಕಲ್ ಕಳವಾಗಿದೆ ಎಂದು ಮಾಲೀಕ ರೋಹನ್ ಆರ್. ಶೆಟ್ಟಿ ಎಂಬುವರು ಉರ್ವ ಠಾಣೆಗೆ ದೂರು ನೀಡಿದ್ದಾರೆ.


ಆ.8ರಂದು ರಾತ್ರಿ 8.45ಕ್ಕೆ ಕಟ್ಟಡದ ಆವರಣದಲ್ಲಿ ಲಾಕ್ ಮಾಡಿ ನಿಲ್ಲಿಸಿ ಮೂರನೇ ಮಹಡಿಯಲ್ಲಿರುವ ಜಿಮ್‌ಗೆ ಹೋಗಿದ್ದಾರೆ. ಜಿಮ್ ಮುಗಿಸಿ 9.30ರ ವೇಳೆಗೆ ಬಂದು ನೋಡಿದಾಗ ಪಾರ್ಕ್ ಮಾಡಿದ ಸ್ಥಳದಲ್ಲಿ ಸೈಕಲ್ ಇರಲಿಲ್ಲ. ‘್ಯಾಂಟಮ್ ರ‌್ಯಾಪಿಡ್’ ಎನ್ನುವ ಕಂಪೆನಿಯ ಸೈಕಲ್ ಆಗಿದ್ದು, 21 ಸಾವಿರ ರೂ. ಅಂದಾಜು ಮೌಲ್ಯ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net