ಮಂಗಳೂರು: ತೀವ್ರ ಮಳೆ ಕಾರಣ ಮಂಗಳೂರು, ಬಂಟ್ವಾಳ ಮತ್ತು ಉಳ್ಳಾಲ ತಾಲೂಕಿನ ಎಲ್ಲ ಅಂಗನವಾಡಿ ಮತ್ತು ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಇಂದು (ಮೇ 30) ರಜೆ ಘೋಷಿಸಲಾಗಿದೆ..ಈ ಮೂರು ತಾಲೂಕುಗಳಲ್ಲಿ ಗುರುವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಆರಂಭದ ಮೊದಲ ದಿನವೇ ಇಲ್ಲಿ ಜಿಲ್ಲಾಡಳಿತ ರಜೆ ಘೋಷಿಸಿದೆ.