ಮಂಗಳೂರು ಬಲ್ಮಠ ಮರ ಬಿದ್ದು ವಾಹನಗಳು ಜಖಂ

mng--1 Jan balmata mara
Published on

ಮಂಗಳೂರು: ನಗರದ ಬಲ್ಮಠ ಮೈದಾನದ ಬಳಿ ಬುಧವಾರ ಮರ ಮುರಿದು ಬಿದ್ದ ಪರಿಣಾಮ ಅಲ್ಲಿ ಪಾರ್ಕ್ ಮಾಡಿದ್ದ ಕಾರು, ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನಗಳು ಜಖಂಗೊಂಡಿದೆ.

ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ತುಂಡಾಗಿದ್ದು, ಮೆಸ್ಕಾಂಗೆ ನಷ್ಟ ಉಂಟಾಗಿದೆ. ಈ ಭಾಗದಲ್ಲಿ ದಿನವಿಡೀ ವಿದ್ಯುತ್ ಹಾಗೂ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ವಾಹನವೊಂದರಲ್ಲಿದ್ದ ಕುಟುಂಬವೊಂದು ಅದೃಷ್ಟವಶಾತ್ ಪಾರಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net