ಮಂಗಳೂರು ಆಟೋದಲ್ಲಿ ಸ್ಫೋಟ, ಎನ್‌ಐಎ ಗಮನ ಹರಿಸುವುದು ಸೂಕ್ತ

Kse
Published on

ಶಿವಮೊಗ್ಗ: ಮಂಗಳೂರಿನ ಆಟೋದಲ್ಲಿ ಸ್ಫೋಟ ಸಂಬಂಧ ಎನ್‌ಐಎ(ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಗಮನ ಹರಿಸುವುದು ಸೂಕ್ತ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಇಂತಹ ಸ್ಫೋಟಗಳು ಪದೇ ಪದೇ ಆಗುತ್ತಿವೆ. ಇದರಿಂದ ಜನರು ಭಯಭೀತಿಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಪೊಲೀಸರು ಅಲರ್ಟ್ ಆಗುವ ಜತೆಗೆ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಈಗಾಗಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಇದು ಭಯ ಹುಟ್ಟಿಸಲು ಮಾಡಿರುವ ಕೃತ್ಯವೋ ಅಥವಾ ಅಲ್ಲವೋ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಒಟ್ಟಾರೆ ಭಯೋತ್ಪಾದಕ ಕೃತ್ಯಗಳಿಗೆ ಪೊಲೀಸರು ಅವಕಾಶ ಕೊಡದೇ ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಬೇಕು. ಯಾವ ಉದ್ದೇಶಕ್ಕೆ ಕೃತ್ಯವೆಸಗಿದ್ದಾರೆ ಎಂಬುದನ್ನು ಜನರಿಗೆ ಬಹಿರಂಗಪಡಿಸಬೇಕಿದೆ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net