

ಮಂಗಳೂರು: ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ಚಿಕಿತ್ಸಾ ವಿಭಾಗದ ಅಡಿಯಲ್ಲಿ ವಿಶೇಷ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗಿದೆ.
ಈ ಕ್ಲೀನಿಕ್‌ನ ಮೂಲಕ ರೋಗಿಗಳಿಗೆ ಅವರ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಕೇಂದ್ರೀಕೃತ, ಅತ್ಯಾಧುನಿಕ ಚಿಕಿತ್ಸೆಯನ್ನು ಒದಗಿಸಲು ಆರಂಭಿಸಿದ್ದು ರೋಗಿಗಳ ಆರೈಕೆಯ ಗುಣಮಟ್ಟವನ್ನು ಸುಧಾರಿಸಲು ಮಹತ್ವದ ಹೆಜ್ಜೆಯಾಗಿದೆ. ಇದರ ಮೂಲಕ ರೋಗಿಗಳಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿದ್ದೇವೆ ಎಂದು ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜು ಡೀನ್ ಡಾ. ಉಣ್ಣಿಕೃಷ್ಣನ್ ಬಿ. ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕ ಡಾ. ಚಕ್ರಪಾಣಿ ಎಂ. ಮಾತನಾಡಿ, ಕೀಲು ಮತ್ತು ಮೂಳೆ ಚಿಕಿತ್ಸಾ ಕ್ಷೇತ್ರದಲ್ಲಿ ರೋಗಿಗಳ ವೈಯಕ್ತಿಕ ಆರೈಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ವಿಶೇಷ ಚಿಕಿತ್ಸಾಲಯಗಳು ಕೀಲು ಮತ್ತು ಮೂಳೆ ಚಿಕಿತ್ಸಾ ವಿಭಾಗದ ವಿವಿಧ ವಿಶೇಷತೆಗಳನ್ನು ಪೂರೈಸುತ್ತವೆ. ರೋಗಿಗಳಿಗೆ ತಜ್ಞರ ಆರೈಕೆ ಹಾಗೂ ವೇಗವಾಗಿ ಚೇತರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಕೀಲು ಮತ್ತು ಮೂಳೆ ಚಿಕಿತ್ಸಾ ವಿಭಾಗದ ಪ್ರೊೆಸರ್ ಮತ್ತು ಮುಖ್ಯಸ್ಥ ಡಾ.ಆತ್ಮಾನಂದ ಎಸ್. ಮಾತನಾಡಿ, ನೂತನ ಕ್ಲೀನಿಕ್‌ಗಳ ಮೂಲಕ ಮೊಣಕಾಲು ಮತ್ತು ಕ್ರೀಡಾ ಗಾಯಗಳು, ಕಾಲು ಮತ್ತು ಪಾದದ ಚಿಕಿತ್ಸೆ, ಕೈ ಮತ್ತು ಮಣಿಕಟ್ಟಿನ ಚಿಕಿತ್ಸೆ, ಸ್ಪೈನ್ ಚಿಕಿತ್ಸೆಗಳನ್ನು ಕ್ಲಿನಿಕ್ ಮೂಲಕ ನೀಡಲಾಗುತ್ತಿದೆ. ದೀರ್ಘ ಕಾಲದ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಪಡೆದುಕೊಳ್ಳಬಹುದು. ಸಂಜೆ 3 ರಿಂದ 4.30 ರವರೆಗೆ ಕ್ಲಿನಿಕ್‌ನಲ್ಲಿ ಸೇವೆ ಲಭ್ಯವಿದೆ ಎಂದು ಅವರು ತಿಳಿಸಿದರು.
ಕೆಎಂಸಿ ಆಸ್ಪತ್ರೆ ಅತ್ತಾವರದ ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಮಡಿ ಮಾತನಾಡಿ, ಸೋಮವಾರ ಮೊಣಕಾಲು ಮತ್ತು ಕ್ರೀಡಾ ಗಾಯಾಳುಗಳ ಚಿಕಿತ್ಸೆ, ಬುಧವಾರ ಕಾಲು ಮತ್ತು ಪಾದದ ಚಿಕಿತ್ಸೆ, ಗುರುವಾರ ಕ್ರೀಡಾ ಗಾಯಾಳುಗಳ ಕ್ಲಿ.ನಿಕ್, ಶುಕ್ರವಾರ ಕೈ ಮತ್ತು ಮಣಿಕಟ್ಟು ಕ್ಲಿನಿಕ್ ಹಾಗೂ ಸ್ಲೈನ್ ಕ್ಲಿನಿಕ್ ಕಾರ್ಯಾಚರಿಸಲಿದೆ ಎಂದರು.