

ಮಂಗಳೂರು: ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿಯ ಹೊಸ ಕ್ಯಾಂಪಸ್ ಮಂಗಳೂರಿನ ಅರ್ಕುಳದಲ್ಲಿ ಫೆ.7ರಂದು ಉದ್ಘಾಟನೆಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ವಿಧಾನ ಸಭಾ ಸ್ಪೀಕರ್ ಯು.ಟಿ.ಕಾದರ್,ಯೆನೆಪೊಯ ಯುನಿವರ್ಸಿಟಿ ಚಾನ್ಸಲರ್ ವೈ ಅಬ್ದುಲ್ಲ ಕುಂಞಿ, ಶಾಹೀನ್ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಡಾ.ಅಬ್ದುಲ್ ಕದೀರ್, ಶಾಸಕ ಡಾ.ಭರತ್ ಶೆಟ್ಟಿ, ಮುಖಂಡರಾದ ಡಾ.ಯು.ಟಿ.ಇಫ್ತಿಕಾರ್, ಇನಾಯತ್ ಅಲಿ, ಖತೀಬರಾದ ಮುಹಮ್ಮದ್ ಕುಂಞಿ, ಮೌ.ತಯ್ಯಬ್, ಡಾ.ಸಯ್ಯದ್ ಹಬೀಬ್, ಇಂಜಿನಿಯರ್ ಮುಹಮ್ಮದ್ ನಿಸಾರ್, ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್, ಕೊಪ್ಪಳ ಜಾಮಿಯ ಮಸೀದಿ ಅಧ್ಯಕ್ಷ ಅಬ್ಬುಲ್ ರಹ್ಮಾನ್ ಭಾಗವಹಿಸಲಿದ್ದಾರೆ.
ಹೊಸ ಕ್ಯಾಂಪಸ್ ಉನ್ನತ ದರ್ಜೆಯ ಆಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಅಕಾಡೆಮಿಯ ವಿಸ್ತರಣೆ ಯೋಜನೆಗಳ ಭಾಗವಾಗಿದೆ. ಮಂಗಳೂರು-ಬೆಂಗಳೂರು ಹೆದ್ದಾರಿಯ ಉದ್ದಕ್ಕೂ 3.6 ಎಕರೆ ವಿಶಾಲ ಪ್ರದೇಶದಲ್ಲಿ ನೆಲೆಗೊಂಡಿರುವ ಕ್ಯಾಂಪಸ್, ಅನುಕೂಲಕರ ಕಲಿಕೆಯ ವಾತಾವರಣವನ್ನು ನೀಡುತ್ತದೆ.
ಎಕ್ಸಿಬಿಷನ್:
ಈ ಸಂಭ್ರಮಕ್ಕೆ ಮೆರುಗು ನೀಡುವ ಉದ್ದೇಶದಿಂದ ಫೆ.7ರಂದು ಸಂಜೆ 3.30ರಿಂದ 8 ಗಂಟೆ ತನಕ ಹಾಗೂ 8 ರಂದು ಬೆಳಗ್ಗೆ 10ರಿಂದ ರಾತ್ರಿ 8ರ ತನಕ ಎಕ್ಸಿಬಿಷನ್ ಆಯೋಜಿಸಲಾಗಿದೆ. ಅಶ್ವರೋಹಣ, ಬಿಲ್ಲುಗಾರಿಕೆ, ಬಲೂನ್ ನೆಗೆತ, ಬೌನ್ಸರ್ ಗೇಮ್ ಹಾಗೂ ಸ್ವಾದಿಷ್ಟ ಖಾದ್ಯಗಳ ಸ್ಟಾಲ್‌ಗಳ ವ್ಯವಸ್ಥೆ ಏರ್ಪಡಿಸಲಾಗಿದೆ. ಪ್ರವೇಶ ಉಚಿತ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.