ವೃದ್ಧಾಶ್ರಮಗಳಿಗೆ ಮಾನವೀಯ ಕೊಡುಗೆ ಅವಶ್ಯ ಅಂಧರ ಸೇವಾ ಸಂಘದ ಕಾರ್ಯದರ್ಶಿ ಪಿ.ರವೀಂದ್ರ ರಾವ್ ಮನವಿ

mng--11 Aug Andara sanga
Published on

ಮಂಗಳೂರು: ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿದ್ದು, ಇಂತಹ ಆಶ್ರಮಗಳಿಗೆ ಮಾನವೀಯ ನೆಲೆಯಲ್ಲಿ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ಕೊಡುಗೆ ನೀಡಬೇಕು ಎಂದು ಅಂಧರ ಸೇವಾ ಸಂಘದ ಕಾರ್ಯದರ್ಶಿ ಪಿ.ರವೀಂದ್ರ ರಾವ್ ಮನವಿ ಮಾಡಿದರು.


ಅಶೋಕನಗರದಲ್ಲಿರುವ ರಾಮಕೃಷ್ಣ ವೃದ್ಧಾಶ್ರಮಕ್ಕೆ ಶನಿವಾರ ಅಂಧರ ಸೇವಾ ಸಂಘದ ಸದಸ್ಯರು ಭೇಟಿ ನೀಡಿದರು. ಈ ವೃದ್ಧಾಶ್ರಮವು ಪ್ರಸ್ತುತ ವಿಸ್ತರಣೆ ಮತ್ತು ನವೀಕರಣ ಕಾರ್ಯಗಳನ್ನು ನಡೆಸುತ್ತಿದೆ. ವೃದ್ಧರು ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಇದು ಆಶ್ರಯ ನೀಡುತ್ತಿದೆ.
ಸಂಘದ ಅಧ್ಯಕ್ಷ ವೈ.ಆರ್. ಭಟ್ ಅವರು, ರಾಮಕೃಷ್ಣ ವೃದ್ಧಾಶ್ರಮದ ಸಮಿತಿ ಸದಸ್ಯರಾದ ಬಿ. ವೆಂಕಟೇಶ್ ಮತ್ತು ತಂಡಕ್ಕೆ ಚೆಕ್ ನೀಡಿದರು.

ಕೋಶಾಧ್ಯಕ್ಷ ಎಂ.ವಿ. ಸುಬ್ರಹ್ಮಣ್ಯ, ಜಂಟಿ ಕಾರ್ಯದರ್ಶಿ ಶೋಭಾ ರಾವ್ ಮತ್ತು ಸಮಿತಿ ಸದಸ್ಯರಾದ ಪಿ. ಸುರೇಂದ್ರ ರಾವ್ ಮತ್ತು ಸ್ವರ್ಣಾ ಆರ್. ಭಟ್ ಉಪಸ್ಥಿತರಿದ್ದರು.


ರಾಮಕೃಷ್ಣ ಆಶ್ರಮದ ಸಮಿತಿ ಸದಸ್ಯರಾದ ಸತೀಶ್, ಅರುಣ್ ರಾವ್, ಗಿರೀಶ್ ರಾವ್ ಮತ್ತು ಅನಂತರಾಮ್ ಅವರು ಸಂಘಕ್ಕೆ ಕೃತಜ್ಞತೆ ಅರ್ಪಿಸಿದರು. ಗಿರೀಶ್ ರಾವ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net