ಜಫ್ತಿ ಮಾಡಿದ್ದ 11 ಕಿ.ಗ್ರಾಂ. ಮಾದಕ ವಸ್ತು ನಾಶ

mng--24 March Drugs
Published on

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ಠಾಣೆಗಳ ವ್ಯಾಪ್ತಿಯಲ್ಲಿ ಜಫ್ತಿ ಮಾಡಲಾದ 11.194 ಕಿ.ಗ್ರಾಂ. ಗಾಂಜಾ ಹಾಗೂ 14 ಮಿ.ಗ್ರಾಂ ಎಂಡಿಎಂಎ ಶುಕ್ರವಾರ ಮೂಲ್ಕಿಯ ರಾಮ್ಕಿ ಎನರ್ಜಿ ಆ್ಯಂಡ್ ಎನ್‌ವಿರೋನ್ಮೆಂಟ್ ಲಿಮಿಟೆಡ್‌ನಲ್ಲಿ ವೈಜ್ಞಾನಿಕವಾಗಿ ನಾಶ ಮಾಡಲಾಯಿತು.


ಸೆನ್ ಪೊಲೀಸ್ ಠಾಣೆಯ 6, ಕೊಣಾಜೆ 5, ಪಣಂಬೂರು 1, ದಕ್ಷಿಣ 1, ಉತ್ತರ 6, ಸುರತ್ಕಲ್ 3, ಬಜ್ಪೆ 2, ಕಂಕನಾಡಿ ನಗರ 1 ಪ್ರಕರಣಗಳಿಗೆ ಸಂಬಧಿಸಿ ಮಾದಕವಸ್ತುಗಳನ್ನು ಜಫ್ತಿ ಮಾಡಲಾಗಿತ್ತು. ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್, ಡಿಸಿಪಿಗಳಾದ ದಿನೇಶ್ ಕುಮಾರ್, ಅನ್ಶು ಕುಮಾರ್, ಎಸಿಪಿ ರವೀಶ್ ನಾಯಕ್ ಮೊದಲಾದವರಿದ್ದರು.


ದ.ಕನ್ನಡದಲ್ಲಿ 12.888 ಕಿ.ಗ್ರಾಂ ನಾಶ: ಮಾದಕ ವಸ್ತುಗಳನ್ನು ಅಕ್ರಮ ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಪತ್ತೆ ಮಾಡಿದ 12.888 ಕಿ.ಗ್ರಾಂ ಮಾದಕ ವಸ್ತುಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಶುಕ್ರವಾರ ಮೂಲ್ಕಿಯಲ್ಲಿ ನಾಶ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net