

ವಿಜಯವಾಣಿ ಸುದ್ದಿಜಾಲ ಗುರುಪುರ
ಒಂದು ರೂ. ದಾನ ಮಾಡಿದರೆ ಅದಕ್ಕೆ ಭಗವಂತ ದುಪ್ಪಟ್ಟು ಹಿಂತಿರುಗಿಸಿಕೊಡುತ್ತಾನೆ. ಸಮಸ್ತ ಭಾರತವೇ ಒಂದು ಕುಟುಂಬವಾಗಿದ್ದು ಇಲ್ಲಿ ಜಾತಿ, ಮತ, ಪಂಥಗಳತ್ತ ನೋಡದೆ ಮಾನವೀಯ ನೆಲೆಯಲ್ಲಿ ನೆರವು ಒದಗಿಸುತ್ತಿರುವುದು ಮೆಚ್ಚುವ ಅಂಶ ಎಂದು ಮಸ್ಜಿದುರ್ರಹ್ಮಾನ್ ಬಾರ್ದಿಲ ಖತೀಬ ಸಂಶೀರ್ ಪೈಝಿ ಅಭಿಪ್ರಾಯಪಟ್ಟರು.
ಕುಪ್ಪೆಪದವು ಕಲ್ಲಾಡಿ ಎಂಬಲ್ಲಿ ಜೋಯ್ ಆಲುಕ್ಕಾಸ್ ಫೌಂಡೇಷನ್ ವತಿಯಿಂದ ಇಸ್ಮಾಯಿಲ್ ಎಂಬುವವರಿಗೆ ನಿರ್ಮಿಸಿಕೊಟ್ಟ ಏಳು ಲಕ್ಷ ರೂ. ವೆಚ್ಚದ ಜಾಯ್ ಹೋಮ್ ಹಸ್ತಾಂತರ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಮುಖ್ಯಸ್ಥ ಅರ್ಜುನ್ ಭಂಡಾರ್ಕರ್ ಅಧ್ಯಕ್ಷತೆ ವಹಿಸಿದ್ದರು. ಕುಪ್ಪೆಪದವು ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಗುರುಪ್ರಸಾದ್ ಕಾರಂತ್, ಕುಪ್ಪೆಪದವು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರೀಫ್ ಕಜೆ, ಕುಪ್ಪೆಪದವು ಬದ್ರಿಯಾ ಜುಮಾ ಮಸೀದಿ ಖತೀಬರು ಶಾಫಿ ಮದನಿ ಕರಾಯ, ರೈತ ಸಂಘ ಪ್ರಧಾನ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬಳಗುತ್ತು, ಕುಪ್ಪೆಪದವು ಗ್ರಾಪಂ ಸದಸ್ಯ ರಫೀಕ್ ಆಚಾರಿಜೋರ, ಬಾರ್ದಿಲ ಮಸೀದಿ ಅಧ್ಯಕ್ಷ ಪಿ.ಎಂ.ಅಲಿಯಬ್ಬ, ಬಿ.ಎ ಅಬೂಬಕ್ಕರ್ ಕಲ್ಲಾಡಿ, ಜೋಯ್ ಆಲುಕ್ಕಾಸ್‌ನ ರೀಜನಲ್ ಮ್ಯಾನೇಜರ್ ಜಿನೇಶ್ ವಿ.ಎಸ್ ಮತ್ತು ಮ್ಯಾನೇಜರ್ ಹರೀಶ್ ಪಿ.ಎಸ್ ಹಾಜರಿದ್ದರು.
ಜಿನೇಶ್ ವಿ.ಎಸ್, ಕಂಟ್ರಾಕ್ಟರ್ ಬದ್ರುದ್ದೀನ್ ಕಲ್ಲಾಡಿ ಹಾಗೂ ಬಡಜನ ಸೇವಾ ಫ್ರೆಂಡ್ಸ್ ಕುಪ್ಪೆಪದವು ಇದರ ಸ್ಥಾಪಕ ಮುನೀರ್ ನಡುಪಲ್ಲ ಅವರನ್ನು ಸನ್ಮಾನಿಸಲಾಯಿತು. ಶ್ವೇತಾ ಜೀವನ್ ಜೋಯ್ ಆಲುಕ್ಕಾಸ್‌ನ ಸಾಮಾಜಿಕ ಚಟುವಟಿಕೆಗಳ ವಿವರ ನೀಡಿದರು. ಮುನೀರ್ ಪದ್ರೆಂಗಿ ಕಾರ್ಯಕ್ರಮ ನಿರೂಪಿಸಿದರು.