ಬಾಡಿಗೆ ಪಾವತಿಸದ ಅಂಗಡಿಗಳು ಪಾಲಿಕೆಯಿಂದ ಜಪ್ತಿ

mng--1 sep Mcc Raid
Published on

ಮಂಗಳೂರು: ಮಹಾನಗರಪಾಲಿಕೆಯ ಒಡೆತನಕ್ಕೊಳಪಟ್ಟ ನವೀಕೃತ ಅಳಕೆ ಮಾರುಕಟ್ಟೆಯಲ್ಲಿ ಪರವಾನಗಿ ಪಡೆದಿರುವ ಬಾಡಿಗೆದಾರರು ಅಂಗಡಿ ಬಾಡಿಗೆಯನ್ನು ಇದುವರೆಗೆ ಪಾವತಿಸದೇ ಇರುವ ಹಿನ್ನೆಲೆಯಲ್ಲಿ ಶುಕ್ರವಾರ ಪಾಲಿಕೆ ಕಂದಾಯ ಅಧಿಕಾರಿ ಮತ್ತು ಸಿಬ್ಬಂದಿ ಮಾರುಕಟ್ಟೆಗೆ ತೆರಳಿ ಮಳಿಗೆಗಳನ್ನು ಜಫ್ತಿ ಮಾಡಿ, ಪಾಲಿಕೆ ಸುಪರ್ದಿಗೆ ಪಡೆದಿದ್ದಾರೆ.


ಕಳೆದ ಹಲವಾರು ತಿಂಗಳಿಂದ ಹಲವು ಬಾರಿ ನೋಟಿಸ್ ನೀಡಲಾಗಿದ್ದರೂ, 10 ಅಂಗಡಿಯವರು ಬಾಡಿಗೆಯನ್ನು ಪಾವತಿಸದೇ, ಸುಮಾರು 28 ಲಕ್ಷ ರೂ. ಬಾಕಿ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಳಿಗೆಗಳನ್ನು ಸುಪರ್ದಿಗೆ ಪಡೆಯುವುದು ಅನಿವಾರ್ಯವಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net