ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಓಡಾಟದಲ್ಲಿ ಶೇ.76ರಷ್ಟು ಪ್ರಗತಿ

MIa
Published on

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಎಂಐಎ)ದ 2022-23ನೇ ಸಾಲಿನಲ್ಲಿ ದೇಶಿಯ ಹಾಗೂ ವಿದೇಶಿ ಯಾನದಲ್ಲಿ ಪ್ರಯಾಣಿಕರ ಓಡಾಟದಲ್ಲಿ ಶೇ.76ರಷ್ಟು ಪ್ರಗತಿ ದಾಖಲಿಸಿಕೊಂಡಿದೆ. ಇದರ ಜತೆಗೆ ಈ ಅವಧಿಯಲ್ಲಿ ಏರ್ ಟ್ರಾಫಿಕ್‌ನಲ್ಲೂ ಶೇ.42 ರಷ್ಟು ಹೆಚ್ಚಳ ದಾಖಲಾಗಿದೆ.


ಎಂಐಎ ರಾಜ್ಯದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದಲ್ಲಿ ಒಂದಾಗಿ ಪರಿಗಣಿಸಲಾಗಿದ್ದು, ಈ ನಿರ್ಣಾಯಕ ನಿಯತಾಂಕಗಳ ಮೇಲೆ ಸ್ಥಿರವಾದ ಮೇಲ್ಮುಖ ಪ್ರವೃತ್ತಿಯನ್ನು ಈ ಪ್ರಗತಿ ದಾಖಲಿಸಿದಂತಾಗಿದೆ.


2022-23ರ ಹಣಕಾಸು ವರ್ಷದಲ್ಲಿ 17,94,054 ಪ್ರಯಾಣಿಕರನ್ನು ನಿಭಾಯಿಸುವಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ.76 ಬೆಳವಣಿಗೆಯನ್ನು ದಾಖಲಿಸಿದೆ. 2021-22ರಲ್ಲಿ ವಿಮಾನ ನಿಲ್ದಾಣವು 10,16,559 ಪ್ರಯಾಣಿಕರನ್ನು ನಿಭಾಯಿಸಿದೆ. 17.94 ಲಕ್ಷ ಪ್ರಯಾಣಿಕರಲ್ಲಿ, 12.08 ಲಕ್ಷ ಪ್ರಯಾಣಿಕರು ದೇಶೀಯರಾಗಿದ್ದು ಮತ್ತು ಉಳಿದ 5.86 ಲಕ್ಷ ಪ್ರಯಾಣಿಕರು ವಿದೇಶದ ಸಾಗರೋತ್ತರ ಪ್ರಯಾಣಿಕರಾಗಿದ್ದಾರೆ.


2022-23 ಅವಧಿಯಲ್ಲಿ 14,475 ಏರ್ ಟ್ರಾಫಿಕ್ ಚಲನೆ(ಎಟಿಎಂ)ಗಳನ್ನು ನಿರ್ವಹಿಸಿದ ವಿಮಾನ ನಿಲ್ದಾಣ ಶೇ.42ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇವುಗಳಲ್ಲಿ 10,060 ದೇಶೀಯ ಚಲನೆಗಳು, 4150 ಅಂತರರಾಷ್ಟ್ರೀಯ ಚಲನೆಗಳು ಮತ್ತು 265 ಸಾಮಾನ್ಯ ವಿಮಾನಯಾನ ಅಥವಾ ಚಾರ್ಟರ್ಡ್ ್ಲೈ ಟ್ ಚಲನೆಗಳು ಸೇರಿವೆ. 2021-22ರಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 7792 ದೇಶೀಯ, 2122 ಅಂತರಾಷ್ಟ್ರೀಯ ಮತ್ತು ಉಳಿದ ಸಾಮಾನ್ಯ ಸೇರಿದಂತೆ 10,212 ಎಟಿಎಂಗಳನ್ನು ನಿರ್ವಹಿಸಿದೆ.


ಮಾರ್ಚ್ 2023 ರಲ್ಲಿ ೆಬ್ರವರಿಗೆ ಹೋಲಿಸಿದರೆ ವಿಮಾನ ನಿಲ್ದಾಣವು ಪ್ರಯಾಣಿಕರ ದಟ್ಟಣೆಯಲ್ಲಿ ಶೇ.7 ಬೆಳವಣಿಗೆಯನ್ನು ದಾಖಲಿಸಿದೆ. ವಿಮಾನ ನಿಲ್ದಾಣವು ೆಬ್ರವರಿಯಲ್ಲಿ 1,34,583 ಪ್ರಯಾಣಿಕರಿಗೆ ಹೋಲಿಸಿದರೆ 98,191 ದೇಶೀಯ ಪ್ರಯಾಣಿಕರು ಸೇರಿದಂತೆ 1,43,788 ಪ್ರಯಾಣಿಕರನ್ನು ನಿರ್ವಹಿಸಿದೆ. ವಾಯುಯಾನ ವಲಯದಲ್ಲಿ ಸಾಮಾನ್ಯವಾಗಿ ೆಬ್ರವರಿಗೆ ಹೋಲಿಸಿದರೆ ಎಟಿಎಂಗಳು ಮಾರ್ಚ್‌ನಲ್ಲಿ ಶೇ.7 ರಷ್ಟು ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net