ವಿಮಾನ ನಿಲ್ದಾಣಕ್ಕೆ ಗುಂಡು ನಿರೋಧಕ ವಾಹನ

_BRVehicle_July27_2
Published on


ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗೆ ಸಿಐಎಸ್‌ಎಫ್‌ನ ಏವಿಯೇಷನ್ ಸೆಕ್ಯುರಿಟಿ ಗ್ರೂಪ್ (ಎಎಸ್‌ಜಿ) ಗುಂಡು ನಿರೋಧಕ ವಾಹನ ನೀಡಿ ಗೌರವಿಸಿದೆ.


ಚೆನ್ನೈಯ ಸಿಐಎಸ್‌ಎಫ್ ಡಿಐಜಿ (ವಿಮಾನ ನಿಲ್ದಾಣಗಳು) ಸೇತುರಾಮನ್ ಪೊನ್ನಿಯೆನ್ ಸೆಲ್ವನ್ ಅವರು ಅತಿಥಿಯಾಗಿದ್ದರು. ಸಿಐಎಸ್‌ಎಫ್‌ಗೆ ವಿಮಾನ ನಿಲ್ದಾಣದ ಇತಿಹಾಸದಲ್ಲಿ ಇಂದು ಮಹತ್ವದ ದಿನವಾಗಿದೆ. ತನ್ನ ವಾಹನಗಳ ಸಮೂಹಕ್ಕೆ ಆ ವಾಹನವನ್ನು ಸೇರಿಸಿದೆ. ಸಿಬ್ಬಂದಿಯ ಪರಿಣಾಮಕಾರಿ ಕರ್ತವ್ಯ ನಿರ್ವಹಿಸಲು ನೆರವಾಗಲಿದೆ. ಮುಂಬೈ, ಬೆಂಗಳೂರು, ಹೈದ್ರಾಬಾದ್, ನವದೆಹಲಿ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಇಂತಹ ವಾಹನಗಳಿವೆ. ಯಾವುದೇ ಭದ್ರತಾ ಬೆದರಿಕೆಗಳನ್ನು ನಿರ್ವಹಿಸಲು ಸಾಧ್ಯವಾಗಲಿದೆ ಎಂದವರು ಹೇಳಿದರು.


ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net