ಏರ್‌ಪೋರ್ಟ್‌ನಲ್ಲಿ ಎಎನ್‌ಪಿಆರ್ ವ್ಯವಸ್ಥೆ ಪಾರ್ಕಿಂಗ್ ಸುಧಾರಣೆಗೆ ಸ್ವಯಂಚಾಲಿತ ಯೋಜನೆ ಜಾರಿ

mng--15 july Airport
Published on

ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಪಾಕಿರ್ಂಗ್ ಸುಧಾರಣೆಗೆ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ಎಎನ್‌ಪಿಆರ್) ವ್ಯವಸ್ಥೆ ಪರಿಚಯಿಸಿದೆ. ಇದರಿಂದ ಫಾಸ್ಟಾೃಗ್‌ನಂತಹ ಇ-ಪಾವತಿ ತಂತ್ರಜ್ಞಾನದೊಂದಿಗೆ ವಿಮಾನ ನಿಲ್ದಾಣಕ್ಕೆ ವಾಹನಗಳ ತಡೆರಹಿತ ಪ್ರವೇಶ ಮತ್ತು ನಿರ್ಗಮನ ಸಾಧ್ಯವಾಗಲಿದೆ.


ಎಎನ್‌ಪಿಆರ್ ವ್ಯವಸ್ಥೆ ಪ್ರವೇಶ ಬೂತ್‌ನಗಳಲ್ಲಿ ನಾಲ್ಕು ಪಥಗಳ ಮೂಲಕ ವಿಮಾನ ನಿಲ್ದಾಣವನ್ನು ಪ್ರವೇಶಿಸುವ ವಾಹನಗಳ ನಂಬರ್ ಪ್ಲೇಟ್ ಓದುತ್ತದೆ. ಒಂದು ವಾಹನ 10 ನಿಮಿಷಗಳ ಕಡ್ಡಾಯ ಉಚಿತ ಪ್ರಯಾಣದ ಸಮಯದೊಳಗೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರೆ ನಿರ್ಗಮನ ಬೂತ್‌ಗಳಲ್ಲಿ ಬೂಮ್ ತಡೆಗೋಡೆ ಸ್ವಯಂಚಾಲಿತವಾಗಿ ತೆರೆಯುತ್ತದೆ. 10 ನಿಮಿಷಕ್ಕಿಂತ ಅಧಿಕ ಅವಧಿ ವಾಹನ ನಿಲ್ಲಿಸಬೇಕಾದವರಿಗೆ ನಿಗದಿತ ಪಾರ್ಕಿಂಗ್ ಶುಲ್ಕ ಪಾವತಿಸುವ ಅವಕಾಶವಿದೆ.


*ಶೀಘ್ರದಲ್ಲೇ ಫಾಸ್ಟಾೃಗ್: ಫಾಸ್ಟಾೃಗ್ ಪಾವತಿ ವಿಧಾನ ಆರಿಸಿಕೊಂಡರೆ ಮತ್ತು ಫಾಸ್ಟಾೃಗ್ ಲೇನ್ ಮೂಲಕ ವಿಮಾನ ನಿಲ್ದಾಣ ಪ್ರವೇಶಿಸಿದರೆ (ಪ್ರವೇಶದಲ್ಲಿ ಲೇನ್ 2 ಮತ್ತು ನಿರ್ಗಮನದಲ್ಲಿ ಲೇನ್ 3), ಅಂತಹ ಗ್ರಾಹಕರು ಸಹ ನಿರ್ಗಮನದಲ್ಲಿ ಮೀಸಲಾದ ಫಾಸ್ಟಾೃಗ್ ಲೇನ್ ಮೂಲಕ ನಿರ್ಗಮಿಸುವ ಮೂಲಕ ತಡೆರಹಿತ ಮಾರ್ಗ ಬಳಸಬಹುದು. ವಿಮಾನ ನಿಲ್ದಾಣ ಎಲ್ಲ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಫಾಸ್ಟಾೃಗ್ ತಂತ್ರಜ್ಞಾನದೊಂದಿಗೆ ಒಳಗೊಳ್ಳುವ ಪ್ರಕ್ರಿಯೆಯಲ್ಲಿದೆ. ಶೀಘ್ರ ಈ ಯೋಜನೆ ಜಾರಿಗೆ ತರಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.ಆಂಬುಲೆನ್ಸ್ ಮತ್ತು ಕ್ರಾಶ್‌ಫೈರ್‌ಗಳಂತಹ ತುರ್ತು ವಾಹನಗಳ ತ್ವರಿತ ಚಲನೆಗೆ ಅನುಕೂಲವಾಗುವ ಅಗತ್ಯ ಗಮನದಲ್ಲಿಟ್ಟುಕೊಂಡು, ವಿಮಾನ ನಿಲ್ದಾಣ ಇತ್ತೀಚೆಗೆ ನಿರ್ಗಮನದಲ್ಲಿ ಲೇನ್ ಒಂದರ ಪಕ್ಕದಲ್ಲಿ ಹೆಚ್ಚುವರಿ ತುರ್ತು ಪಥವನ್ನು ತೆರೆದಿದೆ. ಅಸ್ತಿತ್ವದಲ್ಲಿರುವ ನಿರ್ಗಮನ ಪಥಗಳಲ್ಲಿ ಜಂಗುಳಿಯಿದ್ದರೆ ಈ ವಾಹನಗಳ ತಡೆರಹಿತ ಚಲನೆಗೆ ಈ ಲೇನ್ ಅನುವು ಮಾಡಿಕೊಡುತ್ತದೆ. ವೈದ್ಯಕೀಯ ಅಗತ್ಯಗಳನ್ನು ಹೊಂದಿರುವ ಜನರನ್ನು ಸಾಗಿಸುವ ವಾಹನಗಳ ಸಂಚಾರಕ್ಕೆ ಆದ್ಯತೆ ನೀಡುವುದು ವಿಮಾನ ನಿಲ್ದಾಣದ ಪ್ರಯತ್ನವಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net