

ಮಂಗಳೂರು: ಅಕ್ರಮವಾಗಿ ಅಬುಧಾಬಿಯಿಂದ ಸಾಗಿಸುತ್ತಿದ್ದ 61.06 ಲಕ್ಷ ರೂ. ಮೌಲ್ಯದ ಒಟ್ಟು 1,053 ಗ್ರಾಂ ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ಅದನ್ನು ಗುಳಿಗೆಗಳ ಒಳಗೆ ಹಾಕಿ ಗುದದ್ವಾರದಲ್ಲಿಟ್ಟು ಸಾಗಿಸಲಾಗುತ್ತಿತ್ತು.
ಇನ್ನೊಂದು ಪ್ರಕರಣದಲ್ಲಿ ದುಬಾಯಿಂದ ಅಕ್ರಮವಾಗಿ ಬಟ್ಟೆಯಲ್ಲಿ ಸುತ್ತಿ ಬ್ಯಾಗ್‌ನೊಳಗಿಟ್ಟು ಸಾಗಾಟ ಮಾಡುತ್ತಿದ್ದ 201 ಗ್ರಾಂ ಚಿನ್ನವನ್ನು ಪತ್ತೆ ಮಾಡಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.