

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 60,07,800 ರೂ. ಮೌಲ್ಯದ 969 ಗ್ರಾಂ. ತೂಕದ ಚಿನ್ನವನ್ನು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಿದ ಮೂವರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದುಬೈನಿಂದ ಮಂಗಳೂರಿಗೆ ಬಂದ ಮೂವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಚಿನ್ನ ಅಕ್ರಮ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಪೈಕಿ ಇಬ್ಬರು 24 ಕ್ಯಾರೆಟ್ ಚಿನ್ನವನ್ನು ಹಳದಿ ಬಣ್ಣದ ಪೇಸ್ಟ್‌ರೂಪದಲ್ಲಿ ತಾವು ಧರಿಸಿದ್ದ ಶೂ ಸೋಲ್ ಒಳಗೆ ಇಟ್ಟಿದ್ದರು. ಇನ್ನೋರ್ವ ಪ್ರಯಾಣಿಕ ಚಾಕಲೇಟ್ ಬಾಕ್ಸೃ್ ಮತ್ತು ಬೆಡ್‌ಶೀಟ್‌ನೊಳಗೆ ಇಟ್ಟು ಸಾಗಾಟಕ್ಕೆ ಯತ್ನಿಸಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.