ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಮಹಿಳಾ ದಿನಾಚರಣೆಯಲ್ಲಿ ಡಾ.ಪ್ರೇಮಾ ಡಿಸೋಜ ಹೇಳಿಕೆ

mng--11 march Adani
Published on

ಮಂಗಳೂರು: ಮಹಿಳೆಯರು ವಿದ್ಯಾವಂತರಾಗಿ, ಉದ್ಯೋಗಿಗಳಾಗಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಎಲ್ಲರಿಗೂ ಮಾದರಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಸುಪೋಷಣ್ ಅಧಿಕಾರಿ ಡಾ.ಪ್ರೇಮಾ ಡಿಸೋಜ ಹೇಳಿದರು.

ಪ್ರಾಜೆಕ್ಟ್ ಸುಪೋಶನ್, ಅದಾನಿ ವಿಲ್ಮಾರ್ ಮತ್ತು ಅದಾನಿ ಫೌಂಡೇಶನ್ ಮಂಗಳೂರು ವತಿಯಿಂದ ಐಕಳ ಅಂಗನವಾಡಿಯಲ್ಲಿ ಜರುಗಿದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಹಿರಿಯ ಮಹಿಳೆಯರು ತಮ್ಮ ಜೀವನದ ಅನುಭವ ಹಂಚಿಕೊಂಡರು. ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಅದಾನಿ ಫೌಂಡೇಶನ್‌ನ ಅಸಿಸ್ಟೆಂಟ್ ಸುಪೋಷನ್ ಅಧಿಕಾರಿಗಳಾದ ಚೈತ್ರ, ರೋಶನಿ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ನಾಗವೇಣಿ, ಸ್ತ್ರೀ ಶಕ್ತಿ ಅಧ್ಯಕ್ಷೆ ಸರಿತ ತೌರೋ, ಆಶಾ ಕಾರ್ಯಕರ್ತೆಯರಾದ ಶೋಭಾ, ಸುಪೋಷಣ್ ಸಂಗಿನಿಯರಾದ ಸುಮನ, ದೇವಿಕ, ಮಲ್ಲಿಕ, ದರ್ಶನ, ಮರಿಯ ಮೊದಲಾದವರಿದ್ದರು. ಅಂಗನವಾಡಿ ಕಾರ್ಯಕರ್ತೆ ತನುಜಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net