ಮಾನಭಂಗಕ್ಕೆ ಯತ್ನಿಸಿದ ಆರೋಪಿ ಬಂಧನ

arrested
Published on

ಮಂಗಳೂರು: ಸ್ಟೇಟ್‌ಬ್ಯಾಂಕ್‌ನಿಂದ ಬಜಪೆಗೆ ಹೋಗುವ ಬಸ್‌ನಲ್ಲಿ ಶುಕ್ರವಾ ಯುವತಿಯೊಬ್ಬರ ಮಾನಭಂಗಕ್ಕೆ ಯತ್ನಿಸಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು, ಧರ್ಮದೇಟು ಬಿಗಿಟು ಪೊಲೀಸರಿಗೆ ಒಪ್ಪಿಸಿದ್ದಾರೆ.


ಬಜಪೆ ಕಳವಾರ ಚರ್ಚ್ ಬಳಿಯ ಖುರ್ಸುಗುಡ್ಡೆ ನಿವಾಸಿ ಖಲಂದರ್ ಶಾಫಿ (31) ಬಂಧಿತ ಆರೋಪಿ. ಪ್ರೊಡಕ್ಟ್ ಸೇಲ್ ಮಾಡುವ ಯುವತಿ ಬಸ್‌ನಲ್ಲಿ ಕುಳಿತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಮಾನಭಂಗಕ್ಕೆ ಯತ್ನಿಸಿದ್ದ. ಈ ಸಂದರ್ಭ ಯುವತಿ ತನ್ನ ಸಂಬಂಧಿಕರಿಗೆ ತಿಳಿಸಿದ್ದು, ತಕ್ಷಣ ಬಂದ ಅವರು ಬಲ್ಲಾಳ್‌ಬಾಗ್‌ನಲ್ಲಿ ಬಸ್ ತಡೆದು ಆರೋಪಿಯನ್ನು ಹೊರಗೆಳೆದು ಎರಡೇಟು ಬಿಗಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಆರೋಪಿ ಪೊಲೀಸರಲ್ಲಾಗಲಿ, ನ್ಯಾಯಾಲಯದಲ್ಲಾಗಲಿ ತನಗೆ ಹಲ್ಲೆಯಾದ ಬಗ್ಗೆ ತಿಳಿಸಿಲ್ಲ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net