ಮಾದಕ ವಸ್ತು, ತಲವಾರು ಸಹಿತ ಆರೋಪಿ ಬಂಧನ

mng--15 Jan matan Farooq
Published on

ಮಂಗಳೂರು: ಮಾದಕ ವಸ್ತು ಹಾಗೂ ತಲವಾರು ಇಟ್ಟುಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಬುಧವಾರ ಸಂಜೆ ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಕಸಬ ಬೆಂಗ್ರೆಯ ಉಮ್ಮರ್ ಫಾರೂಕ್ ಯಾನೆ ಮಟನ್ ಫಾರೂಕ್ ( 32) ಬಂಧಿತ. ಪಣಂಬೂರು ಎನ್.ಎಂ.ಪಿ.ಎ ಹಳೇ ಟ್ರಕ್ ಯಾರ್ಡ್ ಕಡೆಯಿಂದ ಪಂಪ್ ಹೌಸ್ ಕಡೆಗೆ ಹೋಗುವ ರಸ್ತೆ ಬದಿ ಈತ ಮಾದಕ ವಸ್ತು ಮತ್ತು ತಲವಾರನ್ನು ಹಿಡಿದು ತಿರುಗಾಡುತ್ತಿದ್ದ ಬಗ್ಗೆ ಪಿಎಸ್‌ಐ ಶ್ರೀಕಲಾ ಕೆ.ಟಿ. ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಆರೋಪಿಯ ವಶದಲ್ಲಿದ್ದ ಒಂದು ಅಪಾಯಕಾರಿ ತಲವಾರು ಹಾಗು 1.72 ಗ್ರಾಮ್ ತೂಕದ 4,000 ರೂಪಾಯಿ ಮೌಲ್ಯದ ಉಏಅಏಉಅಐಘೆಉ ಎಂಬ ಹೆಸರಿನ ಮಾದಕ ವಸ್ತುವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿಯು ಈಗಾಗಲೇ ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣೆ, ಕಂಕನಾಡಿ ನಗರ ಠಾಣೆ, ಉಳ್ಳಾಲ, ಮಂಗಳೂರು ದಕ್ಷಿಣ, ಮಂಗಳೂರು ಪೂರ್ವ, ದ.ಕ ಜಿಲ್ಲೆಯ ಉಪ್ಪಿನಂಗಡಿ, ಹಾಗೂ ಚಿಕ್ಕಮಗಳೂರು ಜಿಲ್ಲೆ ಯಗಟಿ ಪೊಲೀಸ್ ಠಾಣೆಗಳಲ್ಲಿ 9 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ಉಪ್ಪಿನಂಗಡಿ, ಕಂಕನಾಡಿ ನಗರ ಠಾಣೆಗಳಲ್ಲಿ ವಾರಂಟ್ ಇದ್ದು ತಲೆಮರೆಸಿಕೊಂಡಿರುತ್ತಾನೆ.

ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಉಪ ನಿರೀಕ್ಷಕರುಗಳಾದ ಶ್ರೀಕಲಾ ಕೆ.ಟಿ, ಜ್ಞಾನಶೇಖರ, ಮತ್ತು ಅಪರಾಧ ವಿಭಾಗದ ಹೆಡ್ ಕಾನ್‌ಸ್ಟೇಬಲ್‌ಗಳಾದ ಪ್ರೇಮಾನಂದ, ಸಯ್ಯದ್ ಇಂತಿಯಾಜ್, ಜೇಮ್ಸ್, ಕಾನ್‌ಸ್ಟೇಬಲ್‌ಗಳಾದ ಎಂ. ಫಕೀರೇಶ, ಬಸವರಾಜ್ ಗುರಿಕಾರ್, ಶರಣಪ್ಪ ಗೊಲ್ಲಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net