ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ ಪ್ರಕರಣದ ಆರೋಪಿ ಖುಲಾಸೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣ, ಅತ್ಯಾಚಾರ ಪ್ರಕರಣ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಪ್‌ಟಿಎಸ್‌ಸಿ (ಪೋಕ್ಸೋ) ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ.

ಪ್ರಕರಣ ವಿವರ: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿ 2023ರ ೆ.20ರಂದು ರಾತ್ರಿ ಕಾಣೆಯಾಗಿದ್ದು, ಎಲ್ಲ ಕಡೆ ವಿಚಾರಿಸಿದರೂ ವಿದ್ಯಾರ್ಥಿನಿ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಾ.4ರಂದು ಆರೋಪಿ ಮತ್ತು ನೊಂದ ಬಾಲಕಿಯನ್ನು ಮಂಡ್ಯ ಜಿಲ್ಲೆಯ ಮದ್ದೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಶಕ್ಕೆ ಪಡೆದಿದ್ದರು. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಅಪ್ರಾಪ್ತ ಬಾಲಕಿಗೆ ಕಾಲೇಜಿನಿಂದ ತೆರಳುವಾಗ ಆಟೋರಿಕ್ಷಾ ಚಾಲಕ ಚೇತನ್ ಕುಮಾರ್ ಎಂಬಾತನ ಪರಿಚಯವಾಗುತ್ತದೆ. ಮುಂದಕ್ಕೆ ಇವರಿಬ್ಬರ ಮಧ್ಯೆ ಸಲುಗೆಯು ಪ್ರೀತಿಗೆ ತಿರುಗಿ, ಇವರ ಪ್ರೀತಿಯ ವಿಷಯ ನೊಂದ ಬಾಲಕಿಯ ಮನೆಯವರಿಗೆ ತಿಳಿದಿತ್ತು. ಇದರಿಂದ ಆಕೆಯನ್ನು ಕಾಲೇಜು ಬಿಡಿಸಿ ಆತನ ಸಂಪರ್ಕಕ್ಕೆ ಸಿಗದಂತೆ ನೋಡಿಕೊಂಡಿದ್ದರು. ಆದರೆ ಆರೋಪಿ ಮಾತ್ರ ಆಕೆಯ ಸಂಪರ್ಕ ಸಾಧಿಸಿ ೆ.21ರಂದು ಆಕೆಯನ್ನು ಮನೆಯಿಂದ ಕರೆದುಕೊಂಡು ಹೋಗಿ ವಿವಿಧ ಕಡೆ ತಿರುಗಾಡಿ ಮಂಡ್ಯ ಮದ್ದೂರಿಗೆ ಹೋಗಿ ಅಲ್ಲಿ ಬಾಡಿಗೆ ಮನೆಯನ್ನು ಪಡೆಯುತ್ತಾರೆ. ನೊಂದ ಬಾಲಕಿ ಅಪ್ರಾಪ್ತೆ ಎಂದು ತಿಳಿದಿದ್ದರೂ ಲೈಂಗಿಕ ದೌರ್ಜನ್ಯವೆಸಗುತ್ತಾನೆ. ಬಾಲಕಿ ಮತ್ತು ಆರೋಪಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಾ.3ರಂದು ವಶಕ್ಕೆ ಪಡೆಯುತ್ತಾರೆ.

ಪ್ರಕರಣಕ್ಕೆ ಸಂಬಂಧಿಸಿ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್. ಸಮಗ್ರ ವಿಚಾರಣೆ ನಡೆಸಿ, ಆರೋಪಿಯ ವಿರುದ್ಧ ಸರಿಯಾದ ವೈದ್ಯಕೀಯ ಹಾಗೂ ಸಾಂದರ್ಭಿಕ ಸಾಕ್ಷ್ಯ ಪ್ರಾಸಿಕ್ಯೂಶನ್‌ಗೆ ಸಹಕಾರಿಯಾಗುತ್ತಿಲ್ಲ ಮತ್ತು ನೊಂದ ಬಾಲಕಿ ಪರವಾಗಿ ಸಾಕ್ಷ್ಯ ಕೊರತೆಯಿಂದ ಆರೋಪಿಯನ್ನು ದೋಷಮುಕ್ತಗಳಿಸಿ, ಖುಲಾಸೆಗೊಳಿಸುತ್ತಾರೆ.

ಪ್ರಕರಣಕ್ಕೆ ಸಂಬಂಧಿಸಿ 14ಸಾಕ್ಷಿದಾರರನ್ನು ವಿಚಾರಣೆ ಮಾಡಿದ್ದು, 29ಸಾಕ್ಷ್ಯಗಳನ್ನು ನೊಂದ ಬಾಲಕಿಯ ಪರವಾಗಿ ಮತ್ತು 4ಸಾಕ್ಷ್ಯಗಳನ್ನು ಆರೋಪಿತನ ಪರವಾಗಿ ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net