

ಮಂಗಳೂರು: ಕುಂಟಿಕಾನದ ಎ.ಜೆ.ಆಸ್ಪತ್ರೆ ಪ್ರವೇಶ ದ್ವಾರದ ಬಳಿ ದ್ವಿಚಕ್ರ ವಾಹನ ಸವಾರನ ಮೇಲೆ ಕಾರು ಹರಿದು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.
ಕಾವೂರು ನಿವಾಸಿ ಕೌಶಿಕ್ (21) ಮೃತಪಟ್ಟ ಯುವಕ. ರಾತ್ರಿ ಸುಮಾರು 7.50ರ ಸುಮಾರಿಗೆ ಬಾರೆಬೈಲ್ ಕ್ರಾಸ್ ಕಡೆಯಿಂದ ಎ.ಜೆ. ಆಸ್ಪತ್ರೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆ ಸಾಗುತ್ತಿದ್ದ ರಿಕ್ಷಾದ ಹಿಂಭಾಗಕ್ಕೆ ತಾಗಿ ಕೌಶಿಕ್ ಅವರು ಸ್ಕೂಟರ್ ಸಹಿತ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಕುಂಟಿಕಾನ ಕಡೆಯಿಂದ ಸರ್ವೀಸ್ ರಸ್ತೆಯಲ್ಲಿ ಚಾಲಕನ ನಿರ್ಲಕ್ಷೃದಿಂದ ಅತೀ ವೇಗವಾಗಿ ಬಂದ ಸ್ವ್‌ಟಿ ಕಾರೊಂದು ಕೌಶಿಕ್‌ನ ತಲೆಯ ಮೇಲೆಯೇ ಹಾದು ಹೋಗಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ತತ್‌ಕ್ಷಣ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕಾರು ಚಾಲಕನ ವಿರುದ್ಧ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.