

ಮಂಗಳೂರು: ಆಕಾಶ್ ಎಜುಕೇಶನ್ ಸರ್ವಿಸಸ್ ಲಿಮಿಟೆಡ್‌ನ ಮಹತ್ವಾಕಾಂಕ್ಷೆಯ ವಿದ್ಯಾರ್ಥಿ ವೇತನ ಪರೀಕ್ಷೆಯಾದ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಂ ಅಕ್ಟೋಬರ್ 19ರಿಂದ 27ರ ತನಕ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ನಡೆಯಲಿದೆ.
ದೇಶದ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರವೇಶ ಪರೀಕ್ಷೆಯನ್ನು ಆಯೋಜಿಸಲಾಗುತ್ತಿದೆ. ಟಾಪ್ ಸ್ಕೋರರ್‌ಗೆ ಶೇ.100ರಷ್ಟು ವಿದ್ಯಾರ್ಥಿ ವೇತನದ ಜತೆಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆಯ ಸಹಾಯಕ ನಿರ್ದೇಶಕ ಶ್ಯಾಂ ಪ್ರಸಾದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆಯು ಆಫ್‌ಲೈನ್ ಅ.20 ಮತ್ತು 27ರಂದು ದೇಶಾದ್ಯಂತ ಇರುವ ಆಕಾಶ್ ಸಂಸ್ಥೆಯ 315ಕ್ಕೂ ಅಧಿಕ ಕೇಂದ್ರಗಳಲ್ಲಿ ನಡೆಯಲಿದೆ. ಆನ್‌ಲೈನ್ ಪರೀಕ್ಷೆಗಳನ್ನು ಅ.19ರಿಂದ 27ರ ತನಕ ಎಕ್ಸಾಂ ವಿಂಡೋದಲ್ಲಿ ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳು ತಮಗೆ ಅನುಕೂಲವಾಗುವ ಒಂದು ಗಂಟೆ ಸಮಯವನ್ನು ತೆಗೆದುಕೊಳ್ಳಬಹುದು.
ಪರೀಕ್ಷೆ 1 ಗಂಟೆ ಅವಧಿಯದ್ದಾಗಿದೆ ಮತ್ತು 90 ಅಂಕಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 40 ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ. 7ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಮಾನಸಿಕ ಸಾಮರ್ಥ್ಯದ ವಿಷಯಗಳ ಆಧಾರದ ಮೇಲೆ ಪ್ರಶ್ನೆಗಳಿರುತ್ತವೆ. ವೈದ್ಯಕೀಯ ಕೋರ್ಸ್ ಮಾಡಬೇಕೆಂಬ ಆಕಾಂಕ್ಷೆ ಇರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಮಾನಸಿಕ ಸಾಮರ್ಥ್ಯದ ವಿಷಯಗಳ ಮೇಲೆ ಪ್ರಶ್ನೆಗಳಿರುತ್ತವೆ. ಇಂಜಿನಿಯರಿಂಗ್ ಮಾಡಲು ಬಯಸುವವರಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ,ಗಣಿತ ಮತ್ತು ಮಾನಸಿಕ ಸಾಮರ್ಥ್ಯದ ವಿಷಯಗಳ ಆಧಾರದಲ್ಲಿ ಪ್ರಶ್ನೆಗಳಿರುತ್ತವೆ. ಎನ್‌ಇಇಟಿ ತೆಗೆದುಕೊಳ್ಳುವ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಪ್ರಶ್ನೆಗಳಿರುತ್ತವೆ.
ಈ ಪರೀಕ್ಷೆಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಪರೀಕ್ಷೆಗಿಂತ ಮೂರು ದಿನಗಳ ಮೊದಲು ಮತ್ತು ಆಫ್‌ಲೈನ್ ಪರೀಕ್ಷೆ ಆರಂಭಗೊಳ್ಳುವ ಏಳು ದಿನಗಳೊಳಗೆ ನೊಂದಾಯಿಸಿಕೊಳ್ಳಬಹುದು. ಆಫ್‌ಲೈನ್ ಮತ್ತು ಆನ್‌ಲೈನ್ ಪರೀಕ್ಷೆಗಳೆರಡಕ್ಕೂ 200 ರೂ. ಶುಲ್ಕ ಇರಲಿದೆ. ಆ.15ರೊಳಗೆ ನೊಂದಾಯಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ದೊರೆಯಲಿದೆ ಎಂದು ಶ್ಯಾಂ ಪ್ರಸಾದ್ ವಿವರಿಸಿದರು.
ಪರೀಕ್ಷೆಯ ಫಲಿತಾಂಶ 10ನೇ ತರಗತಿ ವಿದ್ಯಾರ್ಥಿಗಳಿಗೆ ನ.8ರಂದು, 7ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ನ.13ರರ ಮತ್ತು 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನ.16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಫಲಿತಾಂಶ ಚ್ಞಠಿಛಿ..ಚ್ಚ.ಜ್ಞಿ ನಲ್ಲಿಯೂ ಲಭ್ಯವಿರಲಿದೆ ಎಂದರು.
ಕೆನಡಿ ಸ್ಪೇಸ್ ಸೆಂಟರ್‌ಗೆ ಟೂರ್: ಪ್ರತಿಭಾನ್ವಿತ 5 ವಿದ್ಯಾರ್ಥಿಗಳನ್ನು ಯುಎಸ್‌ಎದ ಪ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್‌ಗೆ ಸಂಪೂರ್ಣ ಉಚಿತವಾಗಿ ಕರೆದೊಯ್ಯುವ 5 ದಿನಗಳ ಪ್ರವಾಸ ಏರ್ಪಡಿಸಲಾಗಿದೆ. ಫ್ಲೋರಿಡಾದಲ್ಲಿರುವ ಜಾನ್ ಎಫ್.ಕೆನಡಿ ಸ್ಪೇಸ್ ಸೆಂಟರ್, ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ ನ ಕ್ಷೇತ್ರೀಯ ಕೇಂದ್ರಗಳಲ್ಲಿ ಒಂದಾಗಿದೆ.
ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳು ಆಕಾಶ್ ಸಂಸ್ಥೆ ನೀಡುವ ಅತ್ಯುನ್ನದ ಕೋಚಿಂಗ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸೌಲಭ್ಯವನ್ನು ಪಡೆಯಲಿದ್ದಾರೆ. ಈ ಮೂಲಕ ಎನ್‌ಇಇಟಿ, ರಾಜ್ಯ ಮಟ್ಟದ ಸಿಇಟಿಗಳು ಮತ್ತು ಎನ್‌ಟಿಎಸ್‌ಇ ಮತ್ತು ಒಲಿಂಪಿಯಾಡ್‌ನಂತಹ ವಿದ್ಯಾರ್ಥಿ ವೇತನಕ್ಕೆ ನಡೆಸಲಾಗುವ ಪರೀಕ್ಷೆಗಳಿಗೆ ಸಿದ್ದರಾಗಲು ಈ ಕೋಚಿಂಗ್ ನೆರವಾಗಲಿದೆ ಎಂದವರು ಹೇಳಿದರು.
ಸಂಸ್ಥೆಯ ಏರಿಯಾ ಸೇಲ್ಸ್ ಹೆಡ್ ಸೋಮೇಶ್ವರ್, ಮಂಗಳೂರು ಶಾಖೆಯ ಮುಖ್ಯಸ್ಥ ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿದ್ದರು.