ಮಂಗಳೂರು ಬೈಕ್ ಕಳವು ಆರೋಪಿ ಬಂಧನ

arrested
Published on

ಮಂಗಳೂರು : ಎರಡು ಕಡೆಗಳಲ್ಲಿ ಬೈಕ್‌ಗಳನ್ನು ಕಳವು ಮಾಡಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.


ಸುರತ್ಕಲ್ ಕೃಷ್ಣಾಪುರ ಮಸೀದಿ ಬಳಿಯ ನಿವಾಸಿ ಅಬ್ದುಲ್ ಖಾದರ್ ಫಹಾದ್(25) ಬಂಧಿತ ಆರೋಪಿ. ಸೆ.31ರಂದು ಅಂಬೇಡ್ಕರ್ ವೃತ್ತದ ಸಮೀಪ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಹೀರೋಹೋಂಡಾ ಕಂಪೆನಿಯ ಬೈಕ್ ಕಳವಾದ ಬಗ್ಗೆ ಮಹೇಶ್ ಮಂಗಳೂರು ಉತ್ತರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ನ.6ರಂದು ನಗರದ ಕಂಡತಪಳ್ಳಿ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.


ಈತ ಸೆ.31ರಂದು ಅಂಬೇಡ್ಕರ್ ಸರ್ಕಲ್ ಬಳಿ ಹಾಗೂ ಅ.20ರಂದು ಕೊಣಾಜೆ ಸಮೀಪದ ಬಳಿಯೂರಿನಲ್ಲಿ ಕಳವು ಮಾಡಿದ್ದ ಒಟ್ಟು ಸುಮಾರು 70,000 ರೂ. ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.


ಮಂಗಳೂರು ಉತ್ತರ ಠಾಣೆಯ ನಿರೀಕ್ಷಕ ಅಜ್ಮತ್ ಅಲಿ ಜಿ. ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕಿ ವನಜಾಕ್ಷಿ ಕೆ, ಎಎಸ್‌ಐ ದಾಮೋದರ್, ಎಚ್‌ಸಿಗಳಾದ ಮದನ್, ವಿನೋದ್, ಯಶವಂತ ರೈ, ಸಿಬಂದಿಗಳಾದ ಆನಂದ್, ಸಂಪತ್, ಸುನಿಲ್, ಗುರು ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿ ಮೇಲೆ ಈ ಹಿಂದೆ ಮಂಗಳೂರು ಉತ್ತರ, ಬರ್ಕೆ, ಪೂರ್ವ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಕಾಯಿದೆ, ಎನ್‌ಡಿಪಿಎಸ್ ಕಾಯಿದೆಯಡಿ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net