

ಮಂಗಳೂರು: ಸ್ಟಾಕ್ ಕಮ್ಯೂನಿಟಿಗೆ ಸಂಬಂಧಿಸಿದಂತೆ ವಾಟ್ಸಾಪ್ ಮೂಲಕ ಬಂದ ಸಂದೇಶವನ್ನು ನಂಬಿ 13,09,2545 ರೂ. ಕಳೆದುಕೊಂಡಿರುವ ಕುರಿತಂತೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರಿಗೆ ವಿಐಪಿ3 ಗ್ಲೋಬಲ್ ಸೆಕ್ಯುರಿಟೀಸ್ ಅಫೀಶಿಯಲ್ ಸ್ಟಾಕ್ ಕಮ್ಯೂನಿಟಿ ಎನ್ನುವ ಹೆಸರಿನಲ್ಲಿ ಡಿ.14ರಂದು ವಾಟ್ಸಾಪ್ ಸಂದೇಶ ಬಂದಿದ್ದು, ಬಳಿಕ ಅವರು ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದಾರೆ. ಗುಂಪಿನಲ್ಲಿ ಬಂದ ಸಂದೇಶಗಳನ್ನು ನಂಬಿದ ಅವರು ಐಪಿಒ ಸ್ಟಾಕ್‌ಗಳಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಬಳಿಕ ವಿವಿಧ ಐಪಿಒ ಮೊತ್ತದ ಸ್ಟಾಕ್‌ಗಳನ್ನು ಖರೀದಿ ಮಾಡಿದ್ದರು. ವಿವಿಧ ಖಾತೆಗಳಿಂದ ಲಕ್ಷಾಂತರ ರೂ. ಮೊತ್ತವನ್ನು ಜಮೆ ಮಾಡಿದ್ದಾರೆ. ಅಂತಿಮವಾಗಿ ಶೇರು ಮಾರುಕಟ್ಟೆಯ ಮೋಸದ ಜಾಲ ಎಂದು ತಿಳಿದಾಗ ಅವರು 13,09,245 ರೂ. ಕಳೆದುಕೊಂಡಿದ್ದರು. ತಾನು ಕಳೆದುಕೊಂಡಿರುವ ಮೊತ್ತವನ್ನು ವಾಪಾಸು ತೆಗೆಸಿಕೊಡಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.