ಭಾವೈಕ್ಯ ರಥಯಾತ್ರೆಗೆ ಭವ್ಯ ಸ್ವಾಗತ

IMG-20240113-WA0034.jpg
Published on

ಹುಬ್ಬಳ್ಳಿ: ಶಿರಹಟ್ಟಿ ಸಂಸ್ಥಾನ ಮಠದ ಶ್ರೀಕೀರ ಸಿದ್ಧರಾಮ ಸ್ವಾಮೀಜಿ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿರುವ ಭಾವೈಕ್ಯ ರಥಯಾತ್ರೆ ಶನಿವಾರ ಮಂಗಳವಾರಪೇಟೆ ರುದ್ರಾಕ್ಷಿ ಮಠದ ಆವರಣದಿಂದ ಪ್ರಾರಂಭವಾಯಿತು.

ಘಂಟಿಕೇರಿ ಜೋಳದ ಓಣಿ ಮಂಗಳವಾರ ಪೇಟ ಮುಖಾಂತರ ರಥಯಾತ್ರೆ ಸಂಚರಿಸಿ ಘಂಟಿಕೇರಿ ಬಸವಣ್ಣ ದೇವರ ಗುಡಿಯ ಮುಂದೆ ಜನಜಾಗೃತಿ ಸಭೆ ನಡೆಸಲಾಯಿತು.

ರೈತರು ಎತ್ತಿನ ಜೋಡಿಯ ಮೆರವಣಿಗೆ ಹಾಗೂ ಮಹಿಳೆಯರು ರ್ಪೂಣಕುಂಭದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆಯುದ್ದಕ್ಕೂ ಹೂವಿನ ಮಳೆಗರೆದು ಆರತಿ ಎತ್ತಿ ಸ್ವಾಗತಿಸಲಾಯಿತು. ಭಕ್ತರು ಯಶಸ್ವಿ ಕಾರ್ಯಕ್ರಮ ನೆರವೇರಿಸಿಕೊಟ್ಟರು.
ಜಗದ್ಗುರು ಶ್ರೀಫಕೀರ ಸಿದ್ದರಾಮ ಸ್ವಾಮೀಜಿ ಮೆರವಣಿಗೆಯುದ್ದಕ್ಕೂ ಭಕ್ತರಿಗೆ ಆಶೀರ್ವಾದ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net