

ಗುಳೇದಗುಡ್ಡ: ತಾಲೂಕಿನ ಮಂಗಳಗುಡ್ಡ ಗ್ರಾಮದ ಮಂಗಳಮ್ಮ ದೇವಿಯ ಮಹಾರಥೋತ್ಸವವು ಇತ್ತೀಚೆಗೆ ಅದ್ದೂರಿಯಾಗಿ ಜರುಗಿತು.
ಪಟ್ಟದಕಲ್ಲ, ಚಿಮ್ಮಲಗಿ, ಕಾಟಾಪೂರ ಭಕ್ತರು ದೇವಿಗೆ ವಸ್ತ್ರಾಭರಣ ನೆರವೇರಿಸಿ ಉಡಿ ತುಂಬಿದರು. ನಂದಿಕೇಶ್ವರ ಗ್ರಾಮದ ಭಕ್ತರು ವಿವಿಧ ವಾದ್ಯಮೇಳಗಳಿಂದ ಆಗಮಿಸಿ ದೇವಿಯ ರಥಕ್ಕೆ ಹೂಮಾಲೆ ಅರ್ಪಿಸಿ ಭಕ್ತಿ ಮೆರೆದರು. ಬಾಚಿನಗುಡ್ಡ, ಕಳಸ, ಮಂಗಳೂರ, ರಥದ ಹಗ್ಗ, ಮಂಗಳಗುಡ್ಡ ಗ್ರಾಮದ ಭಕ್ತರು ಬಾಳೆಕಂಬ ಸೇವೆ ಸಲ್ಲಿಸಿದರು.
ಹುನಗುಂದ ತಾಲೂಕಿನ ತಳ್ಳಿಕೇರಿ ಹಾಗೂ ಚಿಮ್ಮಲಗಿ ಗ್ರಾಮದ ಭಕ್ತರಿಂದ ದೇವಿಗೆ ಉಡಿತುಂಬಿದರು. ಜಾತ್ರೆಗೆ ಕೊಪ್ಪಳ, ಸೊಲ್ಲಪೂರ, ಮಹಾರಾಷ್ಟ್ರ, ಗೋವಾ, ಬೆಳಗಾವಿ, ಗದಗ, ರಾಯಚೂರ, ಉಡುಪಿ, ಮಂಗಳೂರು ಮತ್ತಿತರೆಡೆಗಳಿಂದ ಭಕ್ತರು ಆಗಮಿಸಿ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ, ರೋಣದ ಬೂದಿಮಠದ ಈಶ್ವನಾಥ ಮಹಾಸ್ವಾಮಿಗಳು, ಬಾಗಲಕೋಟೆಯ ಆಧ್ಯಾತ್ಮಿಕ ಚಿಂತಕ ಪ್ರದೀಪ ಯೋಗ ಗುರುಜಿ ಮತ್ತಿತರರಿದ್ದರು.