ಶಿವಚಿದಂಬರ ಅಪ್ರಕಾಶಿತ ಲೀಲಾಗ್ರಂಥ ಪಠಣದ ಮಂಗಲ ಮಹೋತ್ಸವ

CHIDAMBARA TEMPLE
ಚಿದಂಬರ ದೇವಸ್ಥಾನ
Published on

ವಿಜಯಪುರ: ನಗರದ ಚಿದಂಬರ ದೇವಸ್ಥಾನದಲ್ಲಿ ಶ್ರೀ ಚಿದಂಬರ ಸೇವಾ ಸಮಿತಿ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ಶ್ರೀ ಶಿವ ಚಿದಂಬರ ಅಪ್ರಕಾಶಿತ ಲೀಲಾಗ್ರಂಥ ಪಠಣದ ಮಂಗಲ ಮಹೋತ್ಸವ ಆ.31 ರಂದು ನಡೆಯಲಿದೆ.

ಅಂದು ಸಂಜೆ 4 ಕ್ಕೆ ಇಬ್ರಾಹಿಂಪುರ ವೆಂಕಟೇಶ್ವರ ದೇವಸ್ಥಾನದಿಂದ ಚಿದಂಬರೇಶ್ವರ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಲಿದೆ. ನಂತರ ಸಭೆ ನಡೆಯುವುದು.

2023 ಸೆ.1ರಂದು ಮಂಗಳ ಮಹೋತ್ಸವ ನಡೆಯಲಿದ್ದು, ಮುರಗೋಡ ಕೆಂಗೇರಿಯ ಶಿವಚಿದಂಬರೇಶ್ವರ ಮಠದ ಪೀಠಾಧಿಪತಿ ಪಪೂ ದಿವಾಕರ ದೀಕ್ಷಿತ ಶಂಕರ ದೀಕ್ಷಿತ ಗುರುಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸುವರು. ಬೆಳಗ್ಗೆ 6ಕ್ಕೆ ಕಾಕಡಾರತಿ, 7ಕ್ಕೆ ಕ್ಷೀರಾಭಿಷೇಕ ಹಾಗೂ 8 ಗಂಟೆಗೆ ರುದ್ರಾಭಿಷೇಕ, ಶ್ರೀಮದ್ ಯೋಘೀಶ್ವರ ಯಾಜ್ಞವಲ್ಕ ಮಹರ್ಷಿಗಳ ಅಷ್ಟೊತ್ತರ ನಡೆಯಲಿದೆ.

ಮಧ್ಯಾಹ್ನ 12 ಕ್ಕೆ ಸಭಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮುರಗೋಡ ಕೆಂಗೇರಿಯ ಶಿವಚಿದಂಬರೇಶ್ವರ ಮಠ ಪೀಠಾಧಿಪತಿ ಪಪೂ ಶ್ರೀ ದಿವಾಕರ ದೀಕ್ಷಿತ ಶಂಕರ ದೀಕ್ಷಿತ ಗುರುಮಹಾರಾಜರು ಹಾಗೂ ಲೋಕಾಪುರದ ಶ್ರೀ ಜ್ಞಾನೇಶ್ವರ ಮಠದ ದ್ವಾದಶ ಪೀಠಾಧಿಕಾರಿ ಪಪೂ ಶ್ರೀಶ್ರೀಶ್ರೀ ಬ್ರಹ್ಮಾನಂದ ಮಹಾಸ್ವಾಮೀಜಿ ವಹಿಸುವರು.

ಮಧ್ಯಾಹ್ನ 1ಕ್ಕೆ ಶ್ರೀ ಶಿವಚಿದಂಬರ ಮಹಾಸ್ವಾಮಿ ರಥೋತ್ಸವ, ಮಧ್ಯಾಹ್ನ 2ಕ್ಕೆ ರಜತ ನಾಗಭೂಷಣ ಶ್ರೀ ಶಿವಚಿದಂಬರೇಶ್ವರ ಮಹಾಸ್ವಾಮಿಗೆ ಮಹಾಮಂಗಳಾರತಿ, ನಂತರ ಮಹಾ ಪ್ರಸಾದ, ಸಂಜೆ 7 ಕ್ಕೆ ಸಾಂಪ್ರದಾಯಿಕ ಶ್ರೀ ಚಿದಂಬರ ಭಜನೆ, ಮಹಾಮಂಗಳಾರತಿ, ಮಂತ್ರಪುಷ್ಪ ಜರುಗಲಿವೆ ಎಂದು ಶ್ರೀ ಶಿವಚಿದಂಬರ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net