ಮೇ 10ರಿಂದ 12ರ ವರೆಗೆ ಮಂಗಳಾ ಕಪ್ -24 ರಾಷ್ಟ್ರಮಟ್ಟದ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾಟ

download
Published on



ಮಂಗಳೂರು : ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸಂಸ್ಥೆ ವತಿಯಿಂದ ಮೇ 10ರಿಂದ 12ರ ವರೆಗೆ ‘ಮಂಗಳಾ ಕಪ್ 2024’ ರಾಷ್ಟ್ರಮಟ್ಟದ ಓಪನ್ ಬ್ಯಾಡ್ಮಿಂಟನ್ ಪಂದ್ಯಾಟ ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೇ 10ರಂದು ಬೆಳಗ್ಗೆ 8ಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಪಂದ್ಯಾಟ ಉದ್ಘಾಟಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್ , ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಎ.ಸದಾನಂದ ಶೆಟ್ಟಿ , ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ, ಅಂತಾರಾಷ್ಟ್ರೀಯ ಮೋಟಾರ್ ರ‌್ಯಾಲಿ ಪಟು ಅಶ್ವಿನ್ ನಾಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೇ 12ರಂದು ಸಾಯಂಕಾಲ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು
ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅಸೋಸಿಯೇಶನ್‌ನ ಅಧ್ಯಕ್ಷ ಸುಪ್ರೀತ್ ಆಳ್ವ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂರು ದಿನಗಳ ಪಂದ್ಯಾಟದಲ್ಲಿ ಪುರುಷರ, ಮಹಿಳೆಯರ ಸಿಂಗಲ್ಸ್-ಡಬಲ್ಸ್, ಮಿಕ್ಸ್‌ಡ್ ಡಬಲ್ಸ್, 30, 40 ಮತ್ತು 50 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ ಹಾಗೂ 30 ವರ್ಷ ಮೇಲ್ಪಟ್ಟ ಮಹಿಳೆಯರ ಮುಕ್ತ ಪಂದ್ಯಾಟಗಳು ನಡೆಯಲಿವೆ. ಒಟ್ಟು ಬಹುಮಾನ ಮೊತ್ತ 5.83 ಲಕ್ಷ ರೂ. ಆಗಿದ್ದು, ಕರ್ನಾಟಕ, ಕೇರಳ, ಗೋವಾ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಿಂದ ಕ್ರೀಡಾಪಟುಗಳು
ಭಾಗವಹಿಸಲಿದ್ದಾರೆ ಎಂದು ಮಂಗಳಾ ಕಪ್ ಆಯೋಜನಾ ಸಮಿತಿ ಆಧ್ಯಕ್ಷ ಟೆರೆನ್ಸ್ ಅಜಯ್ ತಿಳಿಸಿದರು.
ಸಂಘಟನಾ ಕಾರ್ಯದರ್ಶಿ ಸಿ.ಎಸ್.ಭಂಡಾರಿ, ಅಸೋಸಿಯೇಶನ್ ಕಾರ್ಯದರ್ಶಿ ದೀಪಕ್ ಕುಮಾರ್, ಖಜಾಂಚಿ ಲಕ್ಷ್ಮಿ ಪಿ.ಸುವರ್ಣ, ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net