

ವಿಜಯವಾಣಿ ಸುದ್ದಿಜಾಲ ಕುಣಿಗಲ್
ಇತ್ತೀಚೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಐತಿಹಾಸಿಕ ಮಂಗಳ ಜಲಾಶಯ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಈ ಪ್ರಯುಕ್ತ ಜಲಾಶಯದ ಒಳ ಹರಿವಿನ ಪ್ರಮಾಣ 1200 ಕ್ಯೂಸೆಕ್ಗೆ ಹೆಚ್ಚಾದ ಹಿನ್ನೆಲೆಯಲ್ಲಿ ಇಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.
ಕುಣಿಗಲ್ ದೊಡ್ಡಕೆರೆ ತುಂಬಿ ಕೋಡಿ ಬಿದ್ದು ಆ ನಂತರ ಮಂಗಳ ಜಲಾಶಯಕ್ಕೆ ಹರಿದು, ಜಲಾಶಯ ತುಂಬಬೇಕಿತ್ತು. ಸಮಯಕ್ಕೆ ಸರಿಯಾಗಿ ಮಳೆಯಾಗದೇ ಕೆಲ ವರ್ಷಗಳಿಂದ ಜಲಾಶಯ ತುಂಬಿರಲಿಲ್ಲ. ಕಳೆದ ವರ್ಷದಿಂದ ಗೊರೂರು ಡ್ಯಾಂ ಭರ್ತಿಯಾಗಿ ಹೇಮಾವತಿ ನಾಲೆಯಿಂದ ಕುಣಿಗಲ್ ದೊಡ್ಡಕೆರೆ ತುಂಬಿ ಆ ಮೂಲಕ ಮಂಗಳ ಜಲಾಶಯ ಭರ್ತಿ ಮಾಡಲಾಗಿತ್ತು. ಈ ಬಾರಿ ಹಿಂಗಾರು ಮಳೆ ತಾಲೂಕಿನಾದ್ಯಂತ ವ್ಯಾಪಕವಾದ ಹಿನ್ನೆಲೆ ಮಳೆಯ ನೀರಿನ ಜತೆಗೆ ಹೇಮಾವತಿ ನೀರಿನಿಂದ ಮಂಗಳ ಜಲಾಶಯ ತುಂಬಿ ಬುಧವಾರ ಕೋಡಿ
ಬಿದ್ದಿದ್ದು ರೆತರ ಸಂತಸಕ್ಕೆ ಕಾರಣವಾಗಿದೆ.
530 ಎಂಸಿಎ್ಟಿ ಗರಿಷ್ಠ ಸಾಮರ್ಥ್ಯವಿರುವ ಮಂಗಳ ಜಲಾಶಯವು ಮಳೆಗೆ ಭರ್ತಿಯಾಗಿ ಕೋಡಿ ಬಿದ್ದಿರುವುದರಿಂದ ಇದರ ದಶ್ಯ ರಮಣೀಯವಾಗಿ ಕೂಡಿದ ಜಲಾಶಯದ ಸೊಬಗನ್ನು ನಾಗರಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸವಿಯುತ್ತಿದ್ದಾರೆ.
ಬೊರ್ಗರೆದ ನಾಗಿನಿ ನದಿ: ಕುಣಿಗಲ್ ತಾಲೂಕಿನ ದೊಡ್ಡಕೆರೆ ಸಂಪೂರ್ಣ ತುಂಬಿ ಹಲವು ದಿನಗಳಿಂದ ಕೋಡಿ ಬಿದ್ದಿದ್ದು, ಕೋಡಿ ನೀರಿನೊಂದಿಗೆ ಮಳೆಯ ನೀರು ನಾಗಿನಿ ನದಿಗೆ ಹರಿಯುತ್ತಿರುವುದರಿಂದ ನಾಗಿನಿ ಮೆದುಂಬಿ ಹರಿಯುತ್ತಿದ್ದಾಳೆ. ಬೋರ್ಗರೆಯುತ್ತಿರುವ ನೀರಿನ ಒಳ ಹರಿವು ಸೇತುವೆಯ ಅಂಚಿಗೆ ತಲುಪಿ ಮುಂದೆ ರಭಸವಾಗಿ ಹರಿಯುತ್ತಿದೆ. ಅಪಾರ ಪ್ರಮಾಣದಲ್ಲಿ ನಾಗಿನಿ ನದಿಗೆ ನೀರು ಹರಿದು ಬರುತ್ತಿರುವುದರಿಂದ
ನದಿ ಅಕ್ಕಪಕ್ಕದಲ್ಲಿರುವ ಕೃಷಿ ಜಮೀನಿಗೆ ನೀರು ಹರಿದು ಜಮೀನು ಸಂಪೂರ್ಣ ಜಲಾವೃತಗೊಂಡಿದೆ.
ಕುಣಿಗಲ್ ತಾಲೂಕಿನ ಎಡಿಯೂರು ಹೋಬಳಿ ಮಂಗಳ ಜಲಾಶಯದ ಪ್ರದೇಶದಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾಗಿದ್ದು, ಜಲಾಶಯದ ಒಳ ಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಒಳ ಹರಿವಿಗೆ ತಕ್ಕಂತೆ ನೀರನ್ನು ಹರಿಸಲಾಗುವುದು. ನದಿ ಪಾತ್ರದ, ಜಲಾಶಯದ ಕೆಳಭಾಗದ ಗ್ರಾಮಗಳ ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಅನಾಹುತ ಉಂಟಾಗದಂತೆ ಸುರತ ಜಾಗಕ್ಕೆ ತೆರಳುವಂತೆ ತಹಸೀಲ್ದಾರ್ ಯು.ರಶ್ಮಿ ಮನವಿ ಮಾಡಿದ್ದಾರೆ.