ಪುಸ್ತಕ ಓದುವುದರಿಂದ ಮನಸ್ಸು, ದೇಹಕ್ಕೆ ಸಂತಸ

UDP-20-2-KASAPA
ಉಡುಪಿಯ ಕಲ್ಯಾಣಪುರದಲ್ಲಿ 'ಮನೆಯೇ ಗ್ರಂಥಾಲಯ' ಅಭಿಯಾನಕ್ಕೆ ಪ್ರತಿಭಾ ಎಲ್​. ಸಾಮಗ ಚಾಲನೆ ನೀಡಿದರು. ರವಿರಾಜ್​ ಎಚ್​.ಪಿ., ಪ್ರೊ. ಎಂ.ಎಲ್​. ಸಾಮಗ, ಡಾ. ರಾಜಲಕ್ಷ್ಮೀ, ವಿಶ್ವನಾಥ್​ ಶೆಣೈ, ರಾಜೇಶ್​ ಭಟ್​ ಪಣಿಯಾಡಿ, ರಂಜನಿ ವಸಂತ್​ ಇತರರಿದ್ದರು.
Published on

ಪ್ರತಿಭಾ ಎಲ್​. ಸಾಮಗ ಅಭಿಪ್ರಾಯ | ಮನೆಯೇ ಗ್ರಂಥಾಲಯ ಅಭಿಯಾನ

  • 25ನೇ ರಜತ ಗ್ರಂಥಾಲಯ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ
ಇಂದಿನ ಮೊಬೈಲ್​ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಎಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದು ಮನಸ್ಸು ಮತ್ತು ದೇಹಕ್ಕೂ ಸಹ ಸಂತೋಷ ನೀಡುತ್ತದೆ ಎಂದು ನಿವೃತ್ತ ಶಿಕ್ಷಕಿ ಪ್ರತಿಭಾ ಎಲ್​. ಸಾಮಗ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ತಾಲೂಕು ಘಟಕದ ವತಿಯಿಂದ ನಡೆಯುತ್ತಿರುವ ಮನೆಯೇ ಗ್ರಂಥಾಲಯ ಅಭಿಯಾನದ 25ನೇ ರಜತ ಗ್ರಂಥಾಲಯ ಕಾರ್ಯಕ್ರಮಕ್ಕೆ ಸಂತೆಕಟ್ಟೆಯ ಕಲ್ಯಾಣಪುರ ವಾತ್ಸಲ್ಯ ಕ್ಲಿನಿಕ್​ನಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಗರ್ಭಿಣಿಯರು ಓದಲಿ

ಗರ್ಭಿಣಿಯರು ಉತ್ತಮವಾದ ಪುಸ್ತಕಗಳನ್ನು ಓದುವಂತಾಗಬೇಕು. ಅದರಿಂದ ಮುಂದೆ ಹುಟ್ಟುವ ಮಕ್ಕಳೂ ಸಹ ಬುದ್ಧಿಶಕ್ತಿ ಹೊಂದಿರುತ್ತಾರೆ. ಜ್ಞಾನವಂತರಾಗುತ್ತಾರೆ. ಬೆಳೆಯುತ್ತ ನಮ್ಮ ಸಂಸ್ಕೃತಿ, ಸಂಸ್ಕಾರ ಮೈಗೂಡಿಸಿಕೊಳ್ಳಲು ಅವರಿಗೂ ಸಹಾಯವಾಗುತ್ತದೆ ಎಂದರು.

ಅಭಿಯಾನದ ಸ್ಟಿಕರ್

ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ. ರಾಜಲಕ್ಷ್ಮೀ ಅವರ ಆತಿಥ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್​. ಸಾಮಗ ಅವರು ಮನೆಯೇ ಗ್ರಂಥಾಲಯ ಅಭಿಯಾನದ ಸ್ಟಿಕರ್ ಅಂಟಿಸಿದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ. ಅಧ್ಯಕ್ಷತೆ ವಹಿಸಿದ್ದರು.

UDP-20-2A-KASAPA
ಡಾ. ಎಂ.ಎಲ್. ಸಾಮಗ ಅವರು ಮನೆಯೇ ಗ್ರಂಥಾಲಯ ಅಭಿಯಾನದ ಸ್ಟಿಕರ್ ಅಂಟಿಸಿದರು. ರವಿರಾಜ್​ ಎಚ್​.ಪಿ., ಇತರರಿದ್ದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಸ್ಥಾಪಕಾಧ್ಯಕ್ಷ ವಿಶ್ವನಾಥ್​ ಶೆಣೈ, ಕಸಾಪ ತಾಲೂಕು ಘಟಕದ ಕೋಶಾಧಿಕಾರಿ ರಾಜೇಶ್​ ಭಟ್​ ಪಣಿಯಾಡಿ, ಗೌ.ಕಾರ್ಯದರ್ಶಿ ರಂಜನಿ ವಸಂತ್​, ವಸಂತ್​ ಕುಮಾರ್​, ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.

ಘಟಕದ ಗೌರವ ಕಾರ್ಯದರ್ಶಿ ಜನಾರ್ದನ್​ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ತಾಲೂಕು ಘಟಕ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಜನರು ಪುಸ್ತಕ ಓದುವಂತಾಗಬೇಕು ಎಂದು ಮನೆ ಮನೆಯಲ್ಲಿ ಗ್ರಂಥಾಲಯ ಅಭಿಯಾನ ನಡೆಸುತ್ತಿರುವುದು ಅಪೂರ್ವವಾದ ಕಾರ್ಯವಾಗಿದೆ. ಪ್ರೊ. ಎಂ.ಎಲ್​. ಸಾಮಗ. ಮಾಜಿ ಅಧ್ಯಕ್ಷ, ಯಕ್ಷಗಾನ ಅಕಾಡೆಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net