ಮಕ್ಕಳಿಗೆ ಸಾಂಸ್ಕೃತಿಕ ತಿಳಿವಳಿಕೆ ನೀಡಿ,  ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ

IMG_20250727_180528_100.jpg
Published on

ಹುಬ್ಬಳ್ಳಿ: ದೇಶದ ಪರಂಪರೆಯಲ್ಲಿ ಅನೇಕ ಹಬ್ಬಗಳಿವೆ, ಅಜ್ಜ ಅಮ್ಮ ಇಲ್ಲದ ಮನೆಯೊಳಗೆ ಸಂಸ್ಕೃತಿ ಇರುವುದಿಲ್ಲ. ಅದಕ್ಕಾಗಿ ಮಕ್ಕಳಿಗೆ ಸಂಸ್ಕೃತಿಯ ತಿಳಿವಳಿಕೆ ಕಡಿಮೆಯಾಗಿದೆ. ಈ ದಿಸೆಯಲ್ಲಿ ಅವರಿಗೆ ನಮ್ಮ ಪರಂಪರೆ ತಿಳಿಸುವ ಕೆಲಸ ಆಗಬೇಕು ಎಂದು ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಹೇಳಿದರು.

ಇಲ್ಲಿಯ ಡಾಲರ್ಸ್ ಕಾಲನಿಯಲ್ಲಿ ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮನೆ ಮನೆಯಲ್ಲಿ ಶ್ರಾವಣ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಐದು ಮಣ್ಣಿನ ಪೂಜೆಗಳಲ್ಲಿ ಗಣೇಶನ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. ಉಳಿದವುಗಳ ಬಗ್ಗೆ ಅಷ್ಟು ಆಸಕ್ತಿ ಇರುವುದಿಲ್ಲ. ಅವುಗಳನ್ನು ಉಳಿಸಿ ಬೆಳೆಸಲು ಒಂದೊಂದು ಏರಿಯಾದಲ್ಲಿಯೇ ಒಂದೊಂದು ಹಬ್ಬದ ಆಚರಣೆಯ ಪ್ರದರ್ಶನವನ್ನು ಮಾಡಿ ಮಕ್ಕಳಿಗೆ ತೋರಿಸಬೇಕು ಎಂದರು.

ಅತಿಥಿಗಳಾಗಿದ್ದ ವರ್ತಕ ಬಸವರಾಜ ಯಕಲಾಸಪುರ ಮಾತನಾಡಿ, ಮನೆಮನೆಯಲ್ಲಿ ಶ್ರಾವಣ ಮಾಸದ ಚಟುವಟಿಕೆ ಆರಂಭಿಸಿರುವುದು ನಮ್ಮ ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಪೂರಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಟಿ. ಅಕ್ಕಿ ಮಾತನಾಡಿದರು. ಅನೇಕ ಕಲಾವಿದರು ಜನಪದ ಹಾಡುಗಳನ್ನು ಹಾಡಿದರು. ಡಾ. ರಾಮು ಮೂಲಗಿ ಪ್ರಾಸ್ತಾವಿಕ ಮಾತನಾಡಿದರು.

ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ಸುಭಾಸಸಿಂಗ್ ಜಮಾದಾರ ಇದ್ದರು.
ಕಾರ್ಯಕ್ರಮ ಸಂಚಾಲಕ ಶಿವರುದ್ರ ಬಡಿಗೇರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net